ಇಂದು ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಪರಿಸರ ಶುಚೀಕರಣ ನಡೆಯಿತು. ಈ ಶ್ರಮದಾನದಲ್ಲಿ ಹುಲ್ಲು ತೆಗೆಯುವ ಯಂತ್ರದ ಮೂಲಕ ಹುಲ್ಲನ್ನು ಉಚಿತವಾಗಿ ತೆಗೆದು ಸಹಕರಿಸಿದ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶುಭಾನಂದ ಕುಳೂರು (ಸುಬ್ಬು), ಪಿ. ಟಿ. ಎ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷರಾದ ಸತೀಶ್ ಎಲಿಯಾಣ, ಮಾತೃ ಸಂಘದ ಉಪಾಧ್ಯಕ್ಷೆಯಾದ ಸುಪ್ರೀತ ಕುಳೂರು ಹೊಸಮನೆ, ಸದಸ್ಯರಾದ ರೂಪ ಕುಳೂರು ಪಾದೆ, ಸ್ವಾತಿ ದೇರಂಬಳ, ಪ್ರೇಮ ಜಿ ಶೆಟ್ಟಿ ಕುಳೂರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಹರಿರಾಮ ಕುಳೂರು ರವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.
FLASH NEWS
Wednesday, 27 November 2019
Wednesday, 20 November 2019
Thursday, 14 November 2019
ರಕ್ಷಕರಿಗೆ ಮಾಹಿತಿ ಶಿಬಿರ
ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕರಿಗೆ ಮಾಹಿತಿ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ, ಬಿ. ಆರ್. ಸಿ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಟೀಚರ್, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಬಳಿಕ ಗುರುಪ್ರಸಾದ್ ರೈ ಯವರಿಂದ ರಕ್ಷಕರಿಗೆ ಮಾಹಿತಿ ಶಿಬಿರ ನಡೆಯಿತು. ಬಿ. ಆರ್. ಸಿ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಟೀಚರ್ ಸಹಕರಿಸಿದರು. ಶಿಬಿರದಲ್ಲಿ ರಕ್ಷಕರು ಸಕ್ರಿಯವಾಗಿ ಪಾಲ್ಗೊಂಡರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.

ಸಂಭ್ರಮದ ಮಕ್ಕಳ ದಿನಾಚರಣೆ
ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಮೀಂಜ ಪಂಚಾಯತಿನ ಅಧ್ಯಕ್ಷೆ ಶಂಶಾದ್ ಶುಕೂರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ 'ಕುಳೂರ ಧ್ವನಿ' ರೇಡಿಯೋ ಸ್ಟೇಷನ್ ಗೆ ಪಂಚಾಯತು ಸದಸ್ಯೆ ಚಂದ್ರಾವತಿ ವಿ.ಪಿ ಚಾಲನೆಯನ್ನಿತ್ತರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಜೇಶ್ವರ ಉಪಜಿಲ್ಲಾ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿ ಗುರುಪ್ರಸಾದ್ ರೈ ಉಲ್ಲಾಸ ಗಣಿತ ಕಾರ್ಯಕ್ರಮದ ಕಿಟ್ ನ್ನು ಮಕ್ಕಳಿಗೆ ನೀಡುವ ಮೂಲಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ, ಶಾಲಾ ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಮಂಜೇಶ್ವರ ಬಿ. ಆರ್. ಸಿ ಯ ಕ್ಲಸ್ಟರ್ ಕೋ ಓರ್ಡಿನೇಟರ್ ಮೋಹಿನಿ ಉಪಸ್ಥಿತರಿದ್ದು ಶುಭ ಕೋರಿದರು. ಇದೇ ಸಂದರ್ಭದಲ್ಲಿ 2019-20 ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಹಾಗೂ ಕಲೋತ್ಸವದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Wednesday, 13 November 2019
ಮಕ್ಕಳ ದಿನಾಚರಣೆಯಂದು ಸಹಾಯ ಹಸ್ತ
ಕಳೆದ ಎರಡು ದಿನಗಳ ಹಿಂದೆ ನಮ್ಮ ಶಾಲಾ ವಿದ್ಯಾರ್ಥಿಗಳಾದ ರಂಜಿನಿ ಹಾಗೂ ರೋಹಿತ್ ರವರ ಮನೆ ಬೆಂಕಿ ಹಿಡಿದು ಭಾಗಶಃ ನಾಶವಾಗಿದ್ದು ಹಲವು ಸೊತ್ತುಗಳು ನಾಶವಾಗಿದೆ. ಒಂದೆಡೆ ಬಡತನ, ಮತ್ತೊಂದೆಡೆ ಅನಿರೀಕ್ಷಿತವಾಗಿ ನಡೆದ ದುರ್ಘಟನೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಸಮಯದಲ್ಲಿ ಮಕ್ಕಳ ದಿನಾಚರಣೆಯ ಇಂದು (14-11-2019) ನಮ್ಮ ಕುಳೂರು ಶಾಲಾ ಶಿಕ್ಷಕ ವೃಂದ ಮತ್ತೊಮ್ಮೆ ಮನೆಗೆ ಭೇಟಿ ಕೊಟ್ಟು ಶಾಲಾ ವತಿಯಿಂದ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದರು.
Monday, 11 November 2019
Subscribe to:
Posts (Atom)