FLASH NEWS
Wednesday, 27 May 2020
Saturday, 23 May 2020
ಚಿತ್ತಾರ - ಕೊರೋನ ಸಮಯದಲ್ಲಿ ಮೂಡಿಬಂದ ಮಕ್ಕಳ ಹಸ್ತ ಪತ್ರಿಕೆ
ಕೊರೋನದ ಈ ಸಂದಿಗ್ಧ ಸ್ಥಿತಿಯಲ್ಲಿ ಮಕ್ಕಳಿಗೆ ಎಲ್ಲೂ ಹೋಗಲು ಸಾಧ್ಯವಾಗದಾಗ ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕ್ರಿಯಾಶೀಲತೆಗೆ ತಡೆ ಬರದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳನ್ನು ನೀಡುವ ಮೂಲಕ ಕಲಿಕೆಯು ನಿರಂತರವಾಗಿರುವಂತೆ ನೋಡಿಕೊಳ್ಳಲಾಯಿತು. ಮಕ್ಕಳು ಮನೆಯಲ್ಲೇ ಕುಳಿತು ಚಟುವಟಿಕೆಗಳನ್ನು ಮಾಡಿ ಕಳುಹಿಸಿದರು. ಮಕ್ಕಳು ರಚಿಸಿದ ವಿವಿಧ ಸ್ವರಚಿತವಾದ ರಚನೆಗಳನ್ನು ಒಟ್ಟು ಗೂಡಿಸಿ ಮಾಡಿದ ಹಸ್ತ ಪತ್ರಿಕೆಯಾಗಿದೆ ಚಿತ್ತಾರ. ಈ ಚಿತ್ತಾರವನ್ನು ನೋಡಲು ಈ ಕೆಳಗಿನ ಲಿಂಕಿಗೆ ಕ್ಲಿಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿರಿ.
Thursday, 21 May 2020
ಆನ್ಲೈನ್ ದಾಖಲಾತಿ
ಕೊರೋನದ ಈ ಸಂದಿಗ್ಧ ಸ್ಥಿತಿ,
ಸಾಮಾಜಿಕ ಅಂತರದೊಂದಿಗೆ ನಮ್ಮ ಶಾಲಾ ದಾಖಲಾತಿ
ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ
ಆನ್ಲೈನ್ ದಾಖಲಾತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
Wednesday, 20 May 2020
Wednesday, 13 May 2020
ಸದಾ ಶಾಲೆಯ ಜೊತೆಗಿನ ಒಡನಾಟದಲ್ಲಿ ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು
ನಮ್ಮ ಕುಳೂರು ಶಾಲೆಯು ಹತ್ತು ಹಲವು ಕಾರಣಗಳಿಂದ ಜನರ ಮೆಚ್ಚುಗೆಗೆ ಪಾತ್ರವಾದ ವಿದ್ಯಾಸಂಸ್ಥೆ. ಇಲ್ಲಿನ ಸಜ್ಜನ ಬಂಧುಗಳ ಸಹಕಾರದಿಂದ ಶಾಲೆಯು ಸಮಾಜದಲ್ಲಿ ತಲೆ ಎತ್ತಿ ನಿಂತುಕೊಂಡು ಮಾದರಿಯೆನಿಸಿದೆ. ಸದಾ ಬೆಂಗಾವಲಾಗಿ ಸಹಕರಿಸುತ್ತಿರುವ ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಜೊತೆಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದ ಸಕ್ರಿಯ ಕಾರ್ಯಚಟುವಟಿಕೆಗಳು ಶಾಲೆಯನ್ನು ಒಂದು ಉತ್ತಮ ಮಟ್ಟಕ್ಕೆ ತರಲು ಸಾಧ್ಯವಾಗಿದೆ.
ಕೊರೋನದ ಈ ಸಂದಿಗ್ಧ ಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ ಶಾಲೆಗೆ ಬರಲು ಅನಾನುಕೂಲವಾಗಿದ್ದು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮನೆಯಲ್ಲೇ ಚಟುವಟಿಕೆಗಳನ್ನು ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ತೀರ ಬಡತನದಲ್ಲಿ ಇರುವವರು, ಇಂಟರ್ನೆಟ್ ಉಪಯೋಗವನ್ನು ಮಾಡದವರಿಗೆ ಈ ವ್ಯವಸ್ಥೆ ಸಿಗದೇ ಇರುವುದನ್ನು ಕಂಡು ನಮ್ಮ ಕುಳೂರು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿಯವರು ಮನೆಯಲ್ಲೇ ಕುಳಿತು ಮಾಡಬಹುದಾದ ಹಲವಾರು ಚಟುವಟಿಕೆಗಳನ್ನು ಒಳಗೊಂಡ ಚಿಣ್ಣರ ಅಂಗಳ ವರ್ಕ್ ಶೀಟ್ ಗಳನ್ನು ಜೆರಾಕ್ಸ್ ಮಾಡಿಸಿ, ಎಲ್ಲಾ ಮಕ್ಕಳ ಮನೆಗಳಿಗೆ ತೆರಳಿ ವಿತರಣೆ ಮಾಡುವ ಮೂಲಕ ಗಮನ ಸೆಳೆದರು. ಇದು ಶಾಲಾ ಮಕ್ಕಳಿಗೆ ಮೊಬೈಲ್'ಗಳನ್ನು ನೋಡಿ ಚಟುವಟಿಕೆ ಮಾಡುವುದಕ್ಕಿಂತಲೂ ಹೆಚ್ಚು ಉತ್ತಮ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಜೊತೆಗೆ ಮಕ್ಕಳನ್ನು, ಮಕ್ಕಳ ಹೆತ್ತವರನ್ನು ಸಮೀಪಿಸಿ ಯೋಗ ಕ್ಷೇಮಗಳನ್ನು ವಿಚಾರಿಸಲು ಅನುಕೂಲವಾಯಿತು. ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳು. ನಿಮ್ಮ ಈ ಶಾಲಾಭಿಮಾನವನ್ನು ಮೆಚ್ಚಲೇಬೇಕು.

Subscribe to:
Posts (Atom)