ಈಗಿನ ಓನ್ಲೈನ್ ಕ್ಲಾಸುಗಳ ಲಭ್ಯತೆಯ ಕುರಿತು ತಿಳಿಯಲು ಹಾಗೂ ಪರಿಹಾರ ಮಾರ್ಗ ಕಂಡುಕೊಳ್ಳಲು ಕೆಲವು ದಿನಗಳ ಹಿಂದೆ ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಕುಟುಂಬಶ್ರೀ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಸಭೆ ನಡೆದಾಗ ಈ ಓನ್ಲೈನ್ ಕ್ಲಾಸುಗಳನ್ನು ವೀಕ್ಷಿಸಲು ಸೌಕರ್ಯಗಳು ಇಲ್ಲದಿರುವುದನ್ನು ಕಂಡು ಬದಲಿ ವ್ಯವಸ್ಥೆಗಾಗಿ ರಕ್ಷಕರಲ್ಲಿ ಕೇಳಿದಾಗ ಸ್ಮಾರ್ಟ್ ಫೋನ್ ಇಲ್ಲದವರು ಹತ್ತಿರದ ಮನೆಗಳಲ್ಲಿ ನೋಡುವುದಾಗಿ ಹೇಳಿರುವರು. ಕೆಲವರು ಸ್ಮಾರ್ಟ್ ಫೋನ್ ತೆಗೆಯುವುದಾಗಿ ತಿಳಿಸಿರುವರು. ಹೀಗಾಗಿ ಹೆಚ್ಚಿನ ಎಲ್ಲಾ ಮಕ್ಕಳಿಗೆ ಇದರ ವ್ಯವಸ್ಥೆಯಾಗಿದ್ದು ಒಂದು ಮನೆಯವರಿಗೆ ಮಾತ್ರ ಈ ವ್ಯವಸ್ಥೆ ಮಾಡಲು ಅನಾನುಕೂಲವಾಯಿತು. ಈ ಸಂದರ್ಭದಲ್ಲಿ ಯುವ ಭಾರತಿ ಸೇವಾ ಸಂಘ, (ರಿ.) ಆದರ್ಶ ನಗರ,ಕುಳೂರು ಇದರ ವತಿಯಿಂದ ಸಂಘದ ಸದಸ್ಯರು ಸ್ಮಾರ್ಟ್ ಫೋನ್ ಕೊಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಶಿಕ್ಷಣದಿಂದ ವಂಚಿತರಾಗಬಾರದೆಂದು ಯುವ ಭಾರತಿ ಸೇವಾ ಸಂಘದವರು ಇಂದು (24-06-2020) ಸ್ಮಾರ್ಟ್ ಫೋನನ್ನು ಅವರ ಮನೆಗೆ ತಲುಪಿಸಿರುತ್ತಾರೆ. ಅವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
FLASH NEWS
Wednesday, 24 June 2020
Friday, 12 June 2020
ಆನ್ಲೈನ್ ತರಗತಿಗೆ ಪರಿಹಾರ ಮತ್ತು ದುರಂತ ನಿವಾರಣಾ ಸಮಿತಿ ರಚನೆ
ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನಡೆಯುತ್ತಿರುವ ಆನ್ಲೈನ್ ತರಗತಿಯ ಲಭ್ಯತೆಯ ಕುರಿತು ಮಾಹಿತಿ ಪಡೆಯಲು ಹಾಗೂ ವ್ಯವಸ್ಥೆ ಇಲ್ಲದ ಮಕ್ಕಳಿಗೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲು ಇಂದು ಶಾಲೆಯಲ್ಲಿ ಸಭೆ ಸೇರಲಾಯಿತು. ಈ ಸಭೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಉಪಸ್ಥಿತರಿದ್ದರು. ಸಭೆಯಲ್ಲಿ ಆನ್ಲೈನ್ ತರಗತಿಯ ವೀಕ್ಷಣೆಗೆ ವ್ಯವಸ್ಥೆ ಇಲ್ಲದ ಮಕ್ಕಳ ರಕ್ಷಕರು ಹಾಜರಿದ್ದರು. ಜೊತೆಗೆ ಕುಟುಂಬಶ್ರೀ ಘಟಕದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಒಂದು ಸಮಿತಿ ರೂಪೀಕರಣ ಮಾಡಲಾಯಿತು. ಅಧ್ಯಕ್ಷರಾಗಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ, ಉಪಾಧ್ಯಕ್ಷರಾಗಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಕನ್ವೀನರ್ ಆಗಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ, ಸಮಿತಿಯಲ್ಲಿ ಪಿ. ಟಿ. ಎ, ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಯ ಪ್ರತಿನಿಧಿಗಳು, ಕುಟುಂಬಶ್ರೀಯ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಆ ನಂತರ ನಡೆದ ದುರಂತ ನಿವಾರಣಾ ಸಮಿತಿ ರೂಪೀಕರಣ ಸಭೆಯಲ್ಲಿ ಸಮಿತಿ ರೂಪೀಕರಣ ಮಾಡಲಾಯಿತು. ಎಲ್ಲಾ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಿರುವ ಸಮಿತಿಯನ್ನು ರಚಿಸಲಾಯಿತು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು.
ಆ ನಂತರ ನಡೆದ ದುರಂತ ನಿವಾರಣಾ ಸಮಿತಿ ರೂಪೀಕರಣ ಸಭೆಯಲ್ಲಿ ಸಮಿತಿ ರೂಪೀಕರಣ ಮಾಡಲಾಯಿತು. ಎಲ್ಲಾ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಿರುವ ಸಮಿತಿಯನ್ನು ರಚಿಸಲಾಯಿತು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು.
Thursday, 11 June 2020
ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಕಳೆದ ಮೂರು ತಿಂಗಳಿಂದ ಯಾವುದೇ ಚಟುವಟಿಕೆಗಳು ನಡೆಯದೆ ಧೂಳು, ಕಸದಿಂದ ಕೂಡಿದ್ದ ನಮ್ಮ ಕುಳೂರು ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು. ತರಗತಿ ಕೋಣೆಗಳು, ಆಫೀಸ್ ಕೋಣೆ, ಮಧ್ಯಾಹ್ನದೂಟದ ಸಭಾಂಗಣ, ಪೀಠೋಪಕರಣಗಳು, ಅಂಗಳ ಮೊದಲಾದ ಕಡೆಗಳಲ್ಲಿ ಸ್ವಚ್ಛ ಮಾಡುವುದರೊಂದಿಗೆ ಶುಚೀಕರಣ ಮಾಡಲಾಯಿತು. ಬಾವಿಗೆ ನೀರಿನ ಪಂಪ್ ಅಳವಡಿಸಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘ ಮತ್ತು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾಭಿಮಾನಿಗಳು ಭಾಗವಹಿಸಿದರು. ಎಲ್ಲರಿಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಧನ್ಯವಾದಗಳನ್ನು ಅರ್ಪಿಸಿದೆ.
Subscribe to:
Posts (Atom)