ಶಾಲಾ ಮಕ್ಕಳಿಗೆ ಆನ್ಲೈನ್ ಕ್ಲಾಸುಗಳು ನಡೆಯುತ್ತಿದ್ದು ಮಕ್ಕಳ ಈ ಕಲಿಕೆಯ ಕುರಿತು ಪರಾಮರ್ಶೆ ನಡೆಸಲು ಕ್ಲಾಸ್ ಪಿ. ಟಿ. ಎ. ಸಭೆಯನ್ನು ಕರೆಯಲಾಯಿತು. ಈ ಸಭೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಮಕ್ಕಳ ಆನ್ಲೈನ್ ಕ್ಲಾಸುಗಳ ಗುಣಾವಗುಣಗಳ ಕುರಿತು ಹೆತ್ತವರು ಅಭಿಪ್ರಾಯ ತಿಳಿಸಿದರು. ಅಧ್ಯಾಪಕರು ಮನೆ ಮನೆ ಭೇಟಿ ನೀಡಿದ್ದನ್ನು ಪ್ರಶಂಸಿಸಿ, ಇನ್ನು ಮುಂದೆಯೂ ಈ ಕಾರ್ಯಕ್ರಮವನ್ನು ಮುಂದುವರಿಸಲು ಮನವಿ ಮಾಡಿದರು. ಶಾಲಾ ಶಿಕ್ಷಕರು ಮನೆ ಭೇಟಿಯನ್ನು ಮುಂದೆಯೂ ಮುಂದುವರಿಸುವುದಾಗಿ ಭರವಸೆಯಿತ್ತರು. ಇದೇ ಸಂದರ್ಭದಲ್ಲಿ ಬಿ. ಆರ್. ಸಿ ವತಿಯಿಂದ ಲಭಿಸಿದ ಕಲಿಕಾ ವರ್ಕ್ ಶೀಟ್ ಮತ್ತು ಮಾಸ್ಕ್'ಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು.
FLASH NEWS
Friday, 16 October 2020
Monday, 5 October 2020
ಎ. ಇ. ಒ ರವರೊಂದಿಗೆ ವಿಶೇಷ ಆನ್ಲೈನ್ ಎಸ್. ಆರ್. ಜಿ ಸಭೆ
ಆನ್ಲೈನ್ ಕ್ಲಾಸುಗಳ ಅವಲೋಕನದ ಕುರಿತಾಗಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀಯುತ ದಿನೇಶ್ ವಿ ಸರ್ ರವರೊಂದಿಗೆ ವಿಶೇಷ ಎಸ್. ಆರ್. ಜಿ ಆನ್ಲೈನ್ ಸಭೆಯನ್ನು ಗೂಗಲ್ ಮೀಟ್'ನಲ್ಲಿ ನಡೆಸಲಾಯಿತು. ವಿದ್ಯಾಧಿಕಾರಿಗಳು ಪ್ರತಿ ಕ್ಲಾಸಿನ ಮಕ್ಕಳ ಪುರೋಗತಿ ಹಾಗೂ ಆನ್ಲೈನ್ ಕ್ಲಾಸುಗಳ ಲಭ್ಯತೆಯ ಕುರಿತು ಮಾಹಿತಿಯನ್ನು ಆಯಾ ತರಗತಿ ಅಧ್ಯಾಪಕರಿಂದ ಪಡೆದುಕೊಂಡರು. ಮಕ್ಕಳ ಆನ್ಲೈನ್ ಕ್ಲಾಸುಗಳ ಗುಣಾವಗುಣಗಳು ಹಾಗೂ ಕುಂದುಕೊರತೆಗಳ ಕುರಿತು ವಿದ್ಯಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಅಧ್ಯಾಪಕರು ನಡೆಸಿದ ಮನೆ ಮನೆ ಭೇಟಿಯನ್ನು ಪ್ರಶಂಸಿದರು. ಮುಂದಿನ ಹಲವಾರು ಕಾರ್ಯ ಯೋಜನೆಗಳ ಕುರಿತು ಸಲಹೆಗಳನ್ನು ನೀಡಿದರು.
Friday, 2 October 2020
ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ
ನಮ್ಮ ಕುಳೂರು ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಜನ್ಮ ದಿನಾಚರಣೆಯನ್ನು ಸೇವನಾ ದಿನವಾಗಿ ವಿಭಿನ್ನ ರೀತಿಯಲ್ಲಿ ಆಚರಿಸಿದರು.
Thursday, 1 October 2020
ಮನೆ ಮನೆ ಭೇಟಿ
ಕೊರೋನದ ಈ ಕಷ್ಟ ಕಾಲದಲ್ಲಿ ಮಕ್ಕಳು ಅನಿವಾರ್ಯವಾಗಿ ಆನ್ಲೈನ್ ಕ್ಲಾಸುಗಳನ್ನು ಅವಲಂಬಿಸಬೇಕಾಯಿತು. ನಮ್ಮ ಕುಳೂರಿನ ಶಾಲಾ ಮಕ್ಕಳಿಗೆ ಈ ಆನ್ಲೈನ್ ಕ್ಲಾಸುಗಳು ಸರಿಯಾದ ಸಮಯದಲ್ಲಿ ಲಭ್ಯವಾಗುವಂತೆ ಮಾಡಲು ಪ್ರತೀ ತರಗತಿಯ ವಾಟ್ಸಾಪ್ ಗ್ರೂಪುಗಳನ್ನು ಮಾಡಿ ಅದರಲ್ಲಿ ಆನ್ಲೈನ್ ಕ್ಲಾಸುಗಳ ಯೂಟ್ಯೂಬ್ ಲಿಂಕ್'ಗಳನ್ನು ಹಾಕಲಾಗುತ್ತಿದೆ. ಜೊತೆಗೆ ಕೆಲವೊಂದು ಚಟುವಟಿಕೆಗಳನ್ನು, ವರ್ಕ್ ಶೀಟ್'ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವು ಮಕ್ಕಳು ತಾವು ಮಾಡಿದಂತಹ ಚಟುವಟಿಕೆಗಳನ್ನು ಅಧ್ಯಾಪಕರಿಗೆ ತೋರಿಸಲು ಬರೆದಂತಹ ಬರಹಗಳನ್ನು ಫೋಟೋ ತೆಗೆದು ತಮ್ಮ ಕ್ಲಾಸು ಅಧ್ಯಾಪಕರಿಗೆ ವಾಟ್ಸಾಪ್ ಮಾಡುತ್ತಿರುವರು.
ಈ ಆನ್ಲೈನ್ ಕ್ಲಾಸುಗಳಲ್ಲಿ ನಮ್ಮ ಶಾಲಾ ಮಕ್ಕಳ ಪುರೋಗತಿ ಹಾಗೂ ಆಗುವಂತಹ ಅನುಕೂಲತೆ ಹಾಗೂ ಅನಾನುಕೂಲತೆಗಳನ್ನು ತಿಳಿಯಲು ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆ ಪ್ರಯುಕ್ತ ಮೊದಲ ಹಂತವಾಗಿ ಈ ಸಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಶಾಲೆಯ ಎಲ್ಲಾ ಮಕ್ಕಳ ಮನೆಗೆ ಭೇಟಿ ಮಾಡಿ, ಮಕ್ಕಳ ಕಲಿಕೆಯ ಆಗುಹೋಗುಗಳನ್ನು ತಿಳಿದು, ತಾವು ಮಾಡಿದ ಚಟುವಟಿಕೆಗಳ ಪರಿಶೀಲನೆ ಮಾಡುವುದರೊಂದಿಗೆ ಆನ್ಲೈನ್ ಕ್ಲಾಸುಗಳಿಂದಾಗುವ ಗುಣಾವಗುಣಗಳ ಕುರಿತು ಕಂಡುಕೊಳ್ಳಲಾಯಿತು. ಮನೆ ಭೇಟಿಯು ಮಕ್ಕಳಲ್ಲಿ ಬಹಳ ಉತ್ಸಾಹ ತಂದಿರುವುದು ಮಾತ್ರವಲ್ಲದೆ ಹೆತ್ತವರಿಗೂ ಸಂತಸ ತಂದಿತ್ತು. ಯಾವುದೇ ಸಂಕೋಚವಿಲ್ಲದೆ ಮಕ್ಕಳು ಹಾಗೂ ಹೆತ್ತವರು ಅಧ್ಯಾಪಕರನ್ನು ಸ್ವಾಗತಿಸಿದಲ್ಲದೇ ಸಂಪೂರ್ಣ ಸಹಕಾರವನ್ನೂ ನೀಡಿದರು. ವಿವಿಧ ವಿಷಯಗಳಿಗೆ ಸಂಬಂಧಿಸಿ ಮಕ್ಕಳ ಓದುವಿಕೆ ಹಾಗೂ ಬರವಣಿಗೆಯ ಬಗ್ಗೆ ತಿಳಿಯಲು ಮನೆಯಲ್ಲೇ ಕೆಲವೊಂದು ಚಟುವಟಿಕೆಗಳನ್ನು ನೀಡಿ ಪರೀಕ್ಷಿಸಲಾಯಿತು. ಮುಂದಿನ ದಿನಗಳಲ್ಲಿ ಈ ಆನ್ಲೈನ್ ಕ್ಲಾಸುಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಆಸಕ್ತಿ ಮೂಡಲು ಸಹಕಾರಿಯಾಯಿತು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವರ್ಕ್ ಶೀಟ್'ಗಳನ್ನೂ ವಿತರಿಸಲಾಯಿತು.