ಗಣಿತ ವಿಷಯವನ್ನು ಮಕ್ಕಳಿಗೆ ಇನ್ನಷ್ಟು ಸರಳಗೊಳಿಸುವ ಸಲುವಾಗಿ ಆಯೋಜಿಸಿದ ನೂತನ ಕಾರ್ಯಕ್ರಮವಾದ 'ಮನೆಯಲ್ಲೊಂದು ಗಣಿತ ಲ್ಯಾಬ್' ಇದರ ಭಾಗವಾಗಿ ಶಾಲಾ ಮಕ್ಕಳಿಗೆ ಗಣಿತ ಕಲಿಕೋಪಕರಣಗಳ ವಿತರಣೆಯು ನಮ್ಮ ಕುಳೂರು ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ನಯನ ಎಂ ರಕ್ಷಕರಿಗೆ ಮಾಹಿತಿ ನೀಡಿದರು. ಶಿಕ್ಷಕಿ ಸೌಮ್ಯ ಪಿ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳ ಪರವಾಗಿ ಕಲಿಕೋಪಕರಣಗಳನ್ನು ರಕ್ಷಕರು ಪಡೆದುಕೊಂಡರು.
FLASH NEWS
Tuesday, 30 March 2021
Thursday, 25 March 2021
'ಮನೆಯಲ್ಲೊಂದು ಗಣಿತ ಲ್ಯಾಬ್' ಕಾರ್ಯಾಗಾರ
ಗಣಿತವನ್ನು ಇನ್ನಷ್ಟು ಸರಳಗೊಳಿಸಲು ಶಾಲಾ ಮಕ್ಕಳಿಗೆ ನಡೆಸಲುದ್ದೇಶಿಸಿದ 'ಮನೆಯಲ್ಲೊಂದು ಗಣಿತ ಲ್ಯಾಬ್' ಎಂಬ ವಿನೂತನ ಕಾರ್ಯಕ್ರಮಕ್ಕೆ ಗಣಿತಕ್ಕೆ ಸಂಬಂಧಿಸಿದ ವಿವಿಧ ಕಲಿಕೋಪಕರಣಗಳ ತಯಾರಿಗೆ ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ಶಿಕ್ಷಕ ವೃಂದದವರು ಕಾರ್ಯಾಗಾರವನ್ನು ನಡೆಸಿದರು. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ನೀಡಲಾಗುವ ಈ ಗಣಿತದ ಕಲಿಕೋಪಕರಣಗಳ ಕಾರ್ಯಾಗಾರಕ್ಕೆ ಶಿಕ್ಷಕಿ ನಯನ ಎಂ ನೇತೃತ್ವ ನೀಡಿದರು.
Friday, 19 March 2021
ಶಾಲಾ ಮಟ್ಟದ ಎಸ್. ಐ. ಟಿ. ಸಿ ತರಬೇತಿ
ಶಾಲಾ ಮಟ್ಟದ ಎಸ್. ಐ. ಟಿ. ಸಿ ತರಬೇತಿಯು ಕುಳೂರು ಶಾಲೆಯಲ್ಲಿ ನಡೆಯಿತು. ಐ. ಟಿ ಜವಾಬ್ದಾರಿ ಹೊತ್ತ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಈ ತರಬೇತಿಯನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃಂದ ಉತ್ಸಾಹದಿಂದ ಈ ತರಬೇತಿಯಲ್ಲಿ ಭಾಗವಹಿಸಿದರು.
Sunday, 7 March 2021
ಹಳೆ ವಿದ್ಯಾರ್ಥಿಗಳ ಕ್ರೀಡೋತ್ಸವ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 'ಕ್ರೀಡೋತ್ಸವ 2021' ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕೋವಿಡ್ 19 ನಿಯಂತ್ರಣಾ ಮಾನದಂಡಗಳನ್ನು ಪಾಲಿಸಿಕೊಂಡು ನಡೆಸಿದ ಈ ಕಾರ್ಯಕ್ರಮವು ಬೆಳಿಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಧ್ವಜಾರೋಹಣಗೈಯುವ ಮೂಲಕ ಚಾಲನೆ ಸಿಕ್ಕಿತು. ಬಳಿಕ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು.
ನಂತರ ಇತ್ತೀಚೆಗೆ ಯೂಟ್ಯೂಬಲ್ಲಿ ಬಿಡುಗಡೆಗೊಂಡ ಕುಳೂರು ಶಾಲಾ ಆನ್ಲೈನ್ ವಾರ್ಷಿಕೋತ್ಸವ ಮತ್ತು ಕುಳೂರು ಕ್ರಿಯೇಷನ್ ಅರ್ಪಿಸುವ 'ಕಂಟಕ' ತುಳು ಕಿರುಚಿತ್ರದ ಪ್ರದರ್ಶನ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ. ಎಲ್, ಕುಳೂರು ವಾರ್ಡ್ ಸದಸ್ಯ ಜನಾರ್ಧನ ಪೂಜಾರಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಯುವ ಉದ್ಯಮಿ ಮತ್ತು ಕಂಟಕ ತುಳು ಕಿರುಚಿತ್ರದ ನಿರ್ಮಾಪಕ ಮೋಹನ್ ಶೆಟ್ಟಿ ಮಜ್ಜಾರ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೀಂಜ ಪಂಚಾಯತಿನ ಸದಸ್ಯರಾಗಿ ಆಯ್ಕೆಯಾದ ಕುಳೂರು ಶಾಲಾ ಹಳೆ ವಿದ್ಯಾರ್ಥಿ ಜನಾರ್ಧನ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ 'ಕಂಟಕ' ಕಿರುಚಿತ್ರದ ತಾಂತ್ರಿಕ ವರ್ಗ ಮತ್ತು ಪ್ರಮುಖ ಕಲಾವಿದರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಕಳೆದ ಶೈಕ್ಷಣಿಕ ವರ್ಷದ ಎಲ್. ಎಸ್. ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಶ್ರೇಣಿಕ್ ಕರ್ಕೇರ, ಆನ್ಲೈನ್ ಚಟುವಟಿಕೆ ಮತ್ತು ಆನ್ಲೈನ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದವನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೊತೆಗೆ ಕ್ರೀಡೋತ್ಸವದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.