FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 13 September 2024

ಓಣಂ ವಿಶೇಷ ಮಧ್ಯಾಹ್ನದೂಟಕ್ಕೆ ಸಹಕರಿಸಿದವರು :

 


ಕುಳೂರು ಶಾಲೆಯಲ್ಲಿ ಸಂಭ್ರಮದ ಓಣಂ ಆಚರಣೆ :

        ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ನಾಡ ಹಬ್ಬವಾದ ಓಣಂ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

Thursday, 12 September 2024

ಕುಳೂರು‌ ಶಾಲೆಗೆ ಡಯೆಟಿನ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಯು. ಪುರುಶೋತ್ತಮ ದಾಸ್ ಭೇಟಿ :

        ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಶಾಲೆಯ ಅಭಿವೃದ್ಧಿಯನ್ನು ತಿಳಿದು ಡಯೆಟ್ ಮಾಯಿಪ್ಪಾಡಿಯ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಶ್ರೀಯುತ ಯು. ಪುರುಷೋಮ ದಾಸ್ ರವರು ಇಂದು ಶಾಲೆಗೆ ಭೇಟಿ ನೀಡಿ  ಶಾಲಾಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

Tuesday, 10 September 2024

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

        ಪ್ರೀ ಪ್ರೈಮರಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ದ್ರುವಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ತರಗತಿಯ ಎಲ್ಲಾ ಸಹಪಾಠಿಗಳಿಗೆ ಪೆನ್ಸಿಲ್ ಹಾಗೂ ಶಾಲೆಯ ಎಲ್ಲಾ ತರಗತಿಗಳಿಗೆ ಲರ್ನಿಂಗ್ ಚಾರ್ಟ್ ನೀಡುವ ಮೂಲಕ ಗಮನ ಸೆಳೆದಳು. ದ್ರುವಿಗೆ ಹುಟ್ಟು ಹಬ್ಬದ ಶುಭಾಶಯಗಳು.



Wednesday, 4 September 2024

ಶಾಲಾ ಗ್ರಂಥಾಲಯಕ್ಕೆ ಸ್ವರಚಿತ ಕೃತಿ ನೀಡಿದ ಯುವ ಲೇಖಕ ಚೇತನ್ ವರ್ಕಾಡಿ :

          ನಾಲ್ಕನೇ ತರಗತಿಯ ವಿದ್ಯಾರ್ಥಿ ವಂಶಿಕ್ ತನ್ನ ಮಾವನಾದ ಲೇಖಕ, ನಾಟಕ ರಚನೆಗಾರ ಶ್ರೀಯುತ ಚೇತನ್ ವರ್ಕಾಡಿಯವರ ರಚನೆಯ 'ಪೊಸತಿರಿ' ತುಳುಕೃತಿಯನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದನು. ಪುಸ್ತಕವನ್ನು ನೀಡಿದ ಚೇತನ್ ವರ್ಕಾಡಿಯವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.



Tuesday, 3 September 2024

ಹುಟ್ಟಿದ ದಿನದ ಅಂಗವಾಗಿ ಶಾಲಾ ಪರಿಸರದಲ್ಲಿ ತರಕಾರಿ ಗಿಡ ಹಾಗೂ ಹೂಗಿಡ ನೆಟ್ಟ ಕೃಶಾಂಕ್

          ಒಂದನೇ ತರಗತಿಯ ಕೃಶಾಂಕ್ ತನ್ನ ಹುಟ್ಟಿದ ದಿನದ ಅಂಗವಾಗಿ ಇಂದು ಶಾಲಾ ಪರಿಸರದಲ್ಲಿ ತರಕಾರಿ ಗಿಡ ಹಾಗೂ ಹೂಗಿಡವನ್ನು ನೆಟ್ಟು ಗಮನ ಸೆಳೆದನು. ಕೃಶಾಂಕ್ ಗೆ ಹುಟ್ಟು ಹಬ್ಬದ ಶುಭಾಶಯಗಳು