FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 11 August 2016

ಆಟಿಕಳಂಜನ ಭೇಟಿ

ಆಟಿಕಳಂಜನ ಭೇಟಿ
ಕಳೆಂಜೆ ಕಳೆಂಜೆನೊ - ಕಳೆಂಜೆ
ಏರೆನ ಮಗೇನೋ?|
ಮಾಯತರಸು ಮಗೇ - ಕಳೆಂಜೆ
ಮಾಯತ ಪುಟ್ಟಾಂಡೆ|
ಮಾಯತ ಪುಟ್ಟಾಂಡೆ - ಕಳೆಂಜೆ
ಜೋಗೊತ ಬಲೆಕ್ಕಾಂಡೆ|
ಪತ್ತೇ ಕಾಲೊಂಡ - ಕಳೆಂಜೆ
ಪದಿನಾಜಿ ಪಿರಯಾಂಡೆ|
ಪದಿನಾಜಿ ಪಿರಯೋಡು ಕಳೆಂಜೆ
ಊರುದಪ್ಪೊಡೆಂದ್|
ಊರುದತ್ತೆನೇ ಕಳೆಂಜೆ
ಕುಂಬಳೆ ಸೀಮೇಗ್..........
ಈ ರೀತಿ 'ಸಂಧಿ' ಹಾಡಿಗೆ ಆಟಿ ತಿಗಳಲ್ಲಿ ಕುಣಿಯುತ್ತಾ ಬರುವ ಆಟಿಕಳಂಜ ತುಳುನಾಡಿನ ಜನಪದ ಕಲೆಗಳಲ್ಲಿ ಒಂದಾಗಿದೆ. ಆಟಿ ತಿಂಗಳಲ್ಲಿ ಮನುಷ್ಯರಿಗೂ, ಜಾನುವಾರುಗಳಿಗೂ ರೋಗರುಜಿನಗಳು ಹೆಚ್ಚಾಗಿ ಬಾಧಿಸುತ್ತವೆ ಎಂದೂ ಇವುಗಳ ನಿವಾರಣೆಗಾಗಿ ಆಟಿಕಳಂಜ ಬರುತ್ತಾನೆಂದೂ ಜನರ ನಂಬುತ್ತಾರೆ.
     ಇಂತಹ ಜನಪದ ಕಲೆಗಳು ಅಳಿವಿನಂಚಿನಲ್ಲಿ ಸಾಗುತ್ತಿವೆಯಾದರೂ ಕುಳೂರಿನಂತಹ ಕೆಲವೊಂದು ಸ್ಥಳಗಳಲ್ಲಿ ಈಗಲೂ ಬರುತ್ತಿರುವುದು ಸಂತಸದ ವಿಷಯ. ಆಟಿಕಳಂಜ ನಮ್ಮ ಶಾಲೆಗೂ ಬಂದು ಕುಣಿದಾಗ ಮಕ್ಕಳು ಸಂತಸಪಟ್ಟರು. ಜೊತೆಗೆ ಆಟಿಕಳಂಜನ ಹಿನ್ನೆಲೆ ಕಥೆಯನ್ನು ತಿಳಿದುಕೊಂಡರು.




No comments:

Post a Comment