FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 31 October 2019

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಪ್ರತಿಭೆ

        ಪೈವಳಿಕೆ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಎಲ್. ಪಿ ವಿಭಾಗದ ವಾಟರ್ ಕಲರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಸಾನ್ವಿತ್ ಶೆಟ್ಟಿ ಎ ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ ಪಡೆದಿರುವನು. ಇವನನ್ನು ಶಾಲಾ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘ ಅಭಿನಂದಿಸಿದೆ.


Saturday, 19 October 2019

ಶಾಸ್ತ್ರೋತ್ಸವ ಪ್ರತಿಭೆಗಳಿಗೆ ಬಹುಮಾನ ವಿತರಣೆ

        ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಮಿಂಚಿದ ನಮ್ಮ ಶಾಲಾ ಪ್ರತಿಭೆಗಳಿಗೆ ಶಾಲಾ ಪಿ. ಟಿ. ಎ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಬಹುಮಾನ ವಿತರಿಸಿದರು.







Wednesday, 16 October 2019

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಮಿಂಚಿದ ಕುಳೂರು ಶಾಲಾ ಪ್ರತಿಭೆಗಳು

           ಕೊಡ್ಲಮೊಗರು ಶ್ರೀ ವಾಣೀ ವಿಜಯ ಪ್ರೌಢಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಿಂಚಿರುವರು. ತೆಂಗಿನ ಗೆರಟೆಯಿಂದ ಉತ್ಪನ್ನ ತಯಾರಿಯ ಸ್ಪರ್ಧೆಯಲ್ಲಿ ಪ್ರಜ್ವಲ್ ಎ ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಶೀಟ್ ಮೆಟಲ್ ವರ್ಕ್ ನಲ್ಲಿ ಅಬ್ದುಲ್ ರಸ್ವೀನ್ ಎ. ಕೆ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಮೆಟಲ್ ಎಂಗ್ರೇವಿಂಗ್ ನಲ್ಲಿ ಯಜ್ಞೇಶ್ ಕೆ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಚಾಕ್ ನಿರ್ಮಾಣದಲ್ಲಿ ಶ್ರೇಣಿಕ್ ಕರ್ಕೇರ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಎಂಬ್ರಾಯ್ಡರಿಯಲ್ಲಿ ಮರಿಯಮ್ ಐಫು ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಹಾಗೂ ತಾಳೆ ಗರಿಯ ಉತ್ಪನ್ನದ ತಯಾರಿಯಲ್ಲಿ ನವ್ಯ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುವರು. ಇವರನ್ನು ಶಾಲಾ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘ ಅಭಿನಂದಿಸಿದೆ.


  ಅಬ್ದುಲ್ ರಸ್ವೀನ್ ಎ. ಕೆ

 ಪ್ರಜ್ವಲ್

 ಯಜ್ಞೇಶ್ ಕೆ

 ಶ್ರೇಣಿಕ್ ಕರ್ಕೇರ

 ನವ್ಯ

 ಮರಿಯಮ್ ಐಫು


Friday, 11 October 2019

ಶಾಲಾ ಮಟ್ಟದ ಕ್ರೀಡಾಕೂಟ

         ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶಾಲಾ ಮಟ್ಟದ ಕ್ರೀಡಾಕೂಟ ಇಂದು ನಡೆಯಿತು. ಕ್ರೀಡಾಕೂಟವನ್ನು ಪಿ. ಟಿ. ಎ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ಔಪಚಾರಿಕವಾಗಿ ಉದ್ಘಾಟಿಸಿದರು. ಮಕ್ಕಳಿಂದ ಪಥ ಸಂಚಲನ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ ಹಾಗೂ ಶಾಲಾ ಪಿ. ಟಿ. ಎ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ಗೌರವ ವಂದನೆ ಸ್ವೀಕರಿಸಿದರು. ಪಥ ಸಂಚಲನವನ್ನು ಬುಲ್ ಬುಲ್ ಅಧ್ಯಾಪಕಿ ನಯನ ಎಂ ಸಂಯೋಜಿಸಿದರು. ಕ್ರೀಡಾಕೂಟದ ವಿವಿಧ ಸ್ಪರ್ಧೆಗಳು ನಡೆದವು.











Wednesday, 2 October 2019

ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ

        ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ 115 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
        ಆ ಪ್ರಯುಕ್ತ ವಿಶೇಷ ಅಸೆಂಬ್ಲಿ ನಡೆಸಿ ಗೌರವ ವಂದನೆ ಸಲ್ಲಿಸಲಾಯಿತು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಿಗೆ ಹಾಗೂ ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರೀತ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ಉಪಸ್ಥಿತರಿದ್ದು ಶುಭ ಕೋರಿದರು. ಬಳಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಶಾಲಾ ಪರಿಸರದ ಶುಚಿತ್ವ ಕಾರ್ಯಕ್ರಮ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ  ಸಂಘದ ಸದಸ್ಯ ಜಯರಾಮ್ ರೈ ಎಲಿಯಾಣ (ಮಾಲಕರು, ಶ್ರೀ ದುರ್ಗಾ ಜನರಲ್ ಸ್ಟೋರ್, ಚಿಗುರುಪಾದೆ) ರವರು ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಿದರು.