FLASH NEWS
Saturday, 15 February 2020
Friday, 14 February 2020
ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ
ನಮ್ಮ ಕುಳೂರು ಶಾಲೆಯಲ್ಲಿ ಕಲಿಕೋತ್ಸವದ ಪೂರ್ವಭಾವಿಯಾಗಿ ಹಾಗೂ ಶಾಲಾ ವಾರ್ಷಿಕೋತ್ಸವದ ಅವಲೋಕನ ನಡೆಸಲು ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆಯು ತಾ. 14-02-2020 ನೇ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಕಲಿಕೋತ್ಸವದ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಮಾರ್ಚ್ ಎರಡನೇ ವಾರದಲ್ಲಿ ನಡೆಯವುದೆಂದು ತೀರ್ಮಾನಿಸಲಾಯಿತು. ಶಾಲಾ ವಾರ್ಷಿಕೋತ್ಸವದ ಅವಲೋಕನ ನಡೆಯಿತು. ರಕ್ಷಕರು ಸಲಹೆ ಸೂಚನೆಗಳನ್ನಿತ್ತರು. ಶಾಲಾ ಶಿಕ್ಷಕಿ ನಯನ ಎಂ ಸ್ವಾಗತಿಸಿ, ಸೌಮ್ಯ ಪಿ ವಂದಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ನಿರೂಪಿಸಿದರು.
ರಕ್ಷಕರಿಗೆ ತರಬೇತಿ
ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ರಕ್ಷಕರಿಗೆ ತರಬೇತಿಯು ತಾ. 14-02-2020 ನೇ ಶುಕ್ರವಾರದಂದು ನಡೆಯಿತು. ಈ ಮಾಹಿತಿ ಶಿಬಿರವನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ನಾಲ್ಕನೇ ತರಬೇತಿ ಮಕ್ಕಳಿಗಿರುವ ಎಲ್. ಎಸ್. ಎಸ್ ಪರೀಕ್ಷೆಯ ಕುರಿತು ಹಾಗೂ ಕಲಿಕಾ ಹಂತಗಳ ಕುರಿತಾಗಿ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ತರಗತಿ ನಡೆಸಿಕೊಟ್ಟರು.
Sunday, 9 February 2020
Saturday, 8 February 2020
Subscribe to:
Posts (Atom)