ನಮ್ಮ ಕುಳೂರು ಶಾಲೆಯಲ್ಲಿ ಇಂದೂ ತೊಂಡೆ ಕೃಷಿಗೆ ಶ್ರಮದಾನ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು ಸಹಕರಿಸಿದರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
FLASH NEWS
Thursday, 27 August 2020
Wednesday, 26 August 2020
ತೊಂಡೆ ಚಪ್ಪರಕ್ಕೆ ಶ್ರಮದಾನ
ಇಂದು ನಮ್ಮ ಕುಳೂರು ಶಾಲಾ ತರಕಾರಿ ತೋಟದ ತೊಂಡೆ ಕೃಷಿಗೆ ಚಪ್ಪರದ ಕೆಲಸಕ್ಕಾಗಿ ಶ್ರಮದಾನ ಮಾಡಲಾಯಿತು. ಜೊತೆಗೆ ತೆಂಗಿನ ಬುಡ ಬಿಡಿಸಿ ಸೊಪ್ಪು ಹಾಕಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳು...
Saturday, 22 August 2020
ಶಾಲೆಗೆ ತೆಂಗಿನ ಸಸಿ ಕೊಡುಗೆ
ನಮ್ಮ ಕುಳೂರು ಶಾಲೆಯ ಹಳೆ ವಿದ್ಯಾರ್ಥಿಯಾದ ಶ್ರೀಯುತ ಸದಾಶಿವ ಸೇನವ ನಾರ್ಣಹಿತ್ಲುರವರು ಈ ಹಿಂದೆ ನೀಡಿದ ವಾಗ್ದಾನದಂತೆ ಶಾಲಾ ಪರಿಸರದಲ್ಲಿ ನೆಡಲು ಒಂದು ತೆಂಗಿನ ಗಿಡವನ್ನು ನೀಡಿರುವುದು ಮಾತ್ರವಲ್ಲದೆ ಅದನ್ನು ನೆಡಲು ಬೇಕಾದ ಹೊಂಡವನ್ನು ಕೂಡ ಮಾಡಿ ಕೊಟ್ಟು ಶಾಲಾಭಿಮಾನವನ್ನು ಮೆರೆದಿರುವರು.
ಜೊತೆಗೆ ಮಂಗಲ್ಪಾಡಿ ಪೈವಳಿಕೆ ಅರ್ಬನ್ ಸಹಕಾರಿ ಬೇಂಕ್ ಉಪ್ಪಳ ಕೈಕಂಬ ಹಾಗೂ ಇದರ ಆಡಳಿತ ಮಂಡಳಿ ಸದಸ್ಯರೂ, ನಮ್ಮ ಕುಳೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿರುವ ಶ್ರೀಯುತ ಮೊಹಮ್ಮದ್ ಕಂಚಿಲರವರು ಒಂದು ತೆಂಗಿನ ಸಸಿ ನೀಡಿರುವರು.
ಇವುಗಳನ್ನು ಇಂದು ಶಾಲಾ ಪರಿಸರದಲ್ಲಿ ನೀಡಲಾಯಿತು.
ತೆಂಗಿನ ಸಸಿ ಕೊಟ್ಟು ಸಹಕರಿಸಿದ ಶಾಲಾಭಿಮಾನಗಳಿಗೆ ನಮ್ಮ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು...
Saturday, 15 August 2020
ಸ್ವಾತಂತ್ರ್ಯೋತ್ಸವದ ಆನ್ಲೈನ್ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭೆಗಳು
ಕೊರೋನ ಕಾರಣದಿಂದಾಗಿ ಈ ಸಲದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗೆ ಸ್ಪರ್ಧೆಗಳನ್ನು ಆನ್ಲೈನ್ ನಲ್ಲೇ ಮಾಡಬೇಕಾಯಿತು. ಆದರೂ ಮಕ್ಕಳು ಬಹಳ ಉತ್ಸುಕತೆಯಿಂದ ಭಾಗವಹಿಸಿದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ಪುಟಾಣಿಗಳಿಗೆ ಅಭಿನಂದನೆಗಳು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಧನ್ಯವಾದಗಳು...
74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಕೊರೋನ ಮಹಾಮಾರಿಯಿಂದಾಗಿ ತತ್ತರಿಸಿರುವ ಜನತೆಯ ಸುರಕ್ಷತಾ ದೃಷ್ಠಿಯಿಂದ ಈ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸರಕಾರದ ಆದೇಶದಂತೆ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಮಕ್ಕಳೇ ಇಲ್ಲದೆ ವಿದ್ಯಾದೇಗುಲವು ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಂತಾಯಿತು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿಕೊಂಡು ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕಮಲಾಕ್ಷ ಕಲ್ಕಾರ್, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆ ಸುಪ್ರೀತ ಕುಳೂರು ಪಾದೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಯೆಲ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು, ಉಪ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಹರಿರಾಮ ಕುಳೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮವನ್ನು ಸಂಘಟಿಸಿದರು. ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.