FLASH NEWS
Friday, 26 August 2022
Tuesday, 16 August 2022
ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಕೆ:
2024 ನೇ ವರ್ಷಕ್ಕೆ ಶತಮಾನೋತ್ಸವವನ್ನು ಆಚರಿಸುವ ನಮ್ಮ ಶಾಲೆಯನ್ನು ಯು.ಪಿ ಶಾಲೆಯಾಗಿ ಭಡ್ತಿಗೊಳಿಸಬೇಕೆಂದು ಇಂದು ಮೀಯಪದವಿಗೆ ಆಗಮಿಸಿದ್ದ ಸನ್ಮಾನ್ಯ ಲೋಕೋಯೋಗಿ ಸಚಿವರಾದ ಶ್ರೀ ಪಿ ಎ ಮೊಹಮ್ಮದ್ ರಿಯಾಝ್ ರವರಿಗೆ ಮನವಿ ಕೊಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸತ್ಯ ನಾರಾಯಣ ಶರ್ಮ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ಉಪಸ್ಥಿತರಿದ್ದರು.
Monday, 15 August 2022
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ:
ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು.
Friday, 12 August 2022
ಅಮೃತ ಮಹೋತ್ಸವದ ಅಂಗವಾಗಿ ಧ್ವಜ ಪ್ರದರ್ಶನ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಆದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವದ ಅಂಗವಾಗಿ ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರ ಧ್ವಜದ ಪ್ರದರ್ಶನ ನಡೆಯಿತು.
ಮೇಳೈಸಿದ ಆಟಿದ ಕೂಟ ಕಾರ್ಯಕ್ರಮ
ತುಳುನಾಡಿನಲ್ಲಿ ಆಟಿ ತಿಂಗಳಿಗೆ ಒಂದು ವಿಶೇಷ ಸ್ಥಾನವಿದೆ. ರೋಗ ರುಜಿನಗಳನ್ನು ದೂರ ಮಾಡುವ ಆಟಿ ಕಳಂಜ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಟಿ ಅಮಾವಾಸ್ಯೆ ಕಷಾಯ, ನವ ವಧುವಿಗೆ ತವರು ಮನೆಗೆ ಕಳುಹಿಸುವ 'ಆಟಿ ತಮ್ಮನ' ಹೀಗೆ ಹತ್ತು ಹಲವು ಸಂಪ್ರದಾಯಗಳು ಪಾರಂಪರ್ಯವಾಗಿ ತುಳುನಾಡಿನಲ್ಲಿ ಈಗಲೂ ರೂಢಿಯಲ್ಲಿದೆ.
ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ
ಮಾದಕ ವಸ್ತುಗಳ ವಿರುದ್ಧ ಹೋರಾಡಲು, ಮಕ್ಕಳಲ್ಲಿ ಜಾಗೃತಿ ಮೂಡಿಸಲು ಇಂದು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಬಳಿಕ ಶಾಲಾ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ಶಾಲಾ ವಿದ್ಯಾರ್ಥಿನಿ ಸಾನ್ವಿಕ ಮಕ್ಕಳಿಗೆ ಈ ಮಾದಕ ವಸ್ತುಗಳ ವಿರುದ್ಧವಾದ ಪ್ರತಿಜ್ಞೆಯನ್ನು ಶಾಲಾ ಮಕ್ಕಳಿಗೆ ಬೋಧಿಸಿದಳು.
Thursday, 11 August 2022
Monday, 8 August 2022
ಹಿರೋಶಿಮಾ - ನಾಗಸಾಕಿ ದಿನ
ಮಕ್ಕಳಿಗೆ ಯುದ್ಧದಿಂದ ಆಗುವ ಅನಾಹುತಗಳು ಹಾಗೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಇಂದು ಹಿರೋಶಿಮಾ ಮತ್ತು ನಾಗಸಾಕಿ ದಿನಾಚರಣೆಯನ್ನು ಆಚರಿಸಲಾಯಿತು.
ಆ ಪ್ರಯುಕ್ತ ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಮಕ್ಕಳಿಗೆ ದಿನ ವಿಶೇಷತೆಯ ಬಗ್ಗೆ ತಿಳಿಸಿದರು. ವಿಡಿಯೋ ಪ್ರದರ್ಶನ ನಡೆಸಲಾಯಿತು.