FLASH NEWS
Tuesday, 26 July 2016
Friday, 22 July 2016
ಉಚಿತ ಸಮವಸ್ತ್ರ ವಿತರಣೆ
ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ನೀಡಲಾಗುವ ಉಚಿತ ಸಮವಸ್ರಗಳ ವಿತರಣಾ ಕಾರ್ಯಕ್ರಮವು ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತೀ ಸೌಮ್ಯಲತಾ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಮವಸ್ತ್ರವನ್ನು ವಾರ್ಡ್ ಸದಸ್ಯೆ ಶ್ರೀಮತೀ ಚಂದ್ರಾವತಿಯವರು ಮಕ್ಕಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಗಣೇಶ್ ರಾವ್, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತೀ ಮಮತ ಉಪಸ್ಥಿತರಿದ್ದರು.
Thursday, 21 July 2016
ಚಾಂದ್ರ ದಿನಾಚರಣೆ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರ ದಿನವನ್ನು ಆಚರಿಸಲಾಯಿತು. ಆ ಪ್ರಯುಕ್ತ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಯವರು ಮಕ್ಕಳಿಗೆ ಚಾಂದ್ರಯಾನದ ಅಣುಕು ಯಾತ್ರೆಯ ಅನುಭವವನ್ನು ನೀಡುವ ಮೂಲಕ ಹೊಸ ಅನುಭವವನ್ನು ನೀಡಿದರು. ಬಳಿಕ ಶ್ರೀಮತಿ ಸೌಮ್ಯ ರವರು ರಸಪ್ರಶ್ನೆಯನ್ನು ನಡೆಸಿಕೊಟ್ಟರು. ವೀಜೇತರಿಗೆ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ರವರು ಬಹುಮಾನವನ್ನು ವಿತರಿಸಿದರು.
Friday, 15 July 2016
Thursday, 7 July 2016
ಶಾಲಾ ನಾಯಕನ ಆಯ್ಕೆ
ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಯನ್ನು ಮಕ್ಕಳ ಶಾಲಾ ಚುನಾವಣೆಯನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವ ರೀತಿಯ ಆಡಳಿತವನ್ನು ಪರಿಚಯಿಸಲಾಯಿತು. ಚುನಾವಣೆಯ ಮುನ್ನಾ ದಿನ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ರವರಿಗೆ ಸಲ್ಲಿಸಿದರು. ಮರುದಿನ ನಡೆದ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಬಂದು ಚುನಾವಣಾ ಗುರುತನ್ನು ಕೈ ಬೆರಳಿಗೆ ಹಾಕಿಸಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಮತ ಚಲಾಯಿಸಿದರು. ಚುನಾವಣೆಯ ಎಲ್ಲಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಬಳಿಕ ಮುಖ್ಯ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ವಿಜೇತ ಅಭ್ಯರ್ಥಿಯ ಬೆಂಬಲಿಗರ ಉದ್ಘೋಷ ಮುಗಿಲು ಮುಟ್ಟಿತ್ತು. ವಿಜಯ ಯಾತ್ರೆಯನ್ನು ನಡೆಸುವ ಮೂಲಕ ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಬೆಂಬಲಿಗರು ನಾಯಕನಾಗಿ ಆಯ್ಕೆಯಾದ ಜಿತಿನ್ ಕುಮಾರ್ ಹಾಗೂ ಉಪನಾಯಕಿಯಾಗಿ ಆಯ್ಕೆಯಾದ ಕುಮಾರಿ ಹರ್ಷಿತ ರವರಿಗೆ ಮಾಲೆ ಹಾಕಿ ಹೂಗುಚ್ಛ ನೀಡುವುದರ ಮೂಲಕ ಅಭಿನಂದಿಸಿದರು. ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ವಚನವನ್ನು ಮುಖ್ಯೋಪಾಧ್ಯಾಯರು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.
Friday, 1 July 2016
ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ
ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17 ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳೆದ ಶೈಕ್ಷಣಿಕ ವರ್ಷದ ಪಿ.ಟಿ.ಎ ಅಧ್ಯಕ್ಷ ಶ್ರೀ ಹರಿರಾಮ್ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ವಾರ್ಷಿಕ ವರದಿಯನ್ನು ಮಂಡಿಸಿದರು. ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ಹಾಗೂ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಶಶಿಕಲಾರವರು ಉಪಸ್ಥಿತರಿದ್ದರು. ನೂತನ ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಸೌಮ್ಯಲತಾ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುರೇಖರವರು ಅವಿರೋಧವಾಗಿ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಮಮತ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುಲೋಚನ ರವರು ಅವಿರೋಧವಾಗಿ ಆಯ್ಕೆಯಾದರು. ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು.
Subscribe to:
Posts (Atom)