FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 19 June 2021

ಕಲಿಕಾ ಕೇಂದ್ರಗಳ ವ್ಯವಸ್ಥೆ

          ವಿವಿಧ ಕಾರಣಗಳಿಂದ ಆನ್ಲೈನ್ ಕ್ಲಾಸ್ ನೋಡಲು ಸಮಸ್ಯೆ ಇರುವ ಮಕ್ಕಳಿಗೆ ಕಲಿಕಾ ಕೇಂದ್ರಗಳ ಮೂಲಕ ಆನ್ಲೈನ್ ಕ್ಲಾಸ್ ವೀಕ್ಷಿಸಲು ವ್ಯವಸ್ಥೆ ಮಾಡುವ ಸಲುವಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಳೆದ ವರ್ಷದ ಆನ್ಲೈನ್ ಕ್ಲಾಸುಗಳ ನ್ಯೂನತೆಗಳನ್ನು ಪರಿಹರಿಸಲು ಶಾಲಾ ಶಿಕ್ಷಕ ವೃಂದ ಸ್ವ ಇಚ್ಛೆಯಿಂದ ಪ್ರತಿ ತರಗತಿಯ ಮಕ್ಕಳೊಂದಿಗೆ ಕ್ಲಾಸ್ ಅಧ್ಯಾಪಕರು ಪ್ರತಿ ದಿನ ಈಗ ನಡೆಸುತ್ತಿರುವ ಗೂಗಲ್ ಮೀಟ್ ಕ್ಲಾಸನ್ನು ಎಲ್ಲರೂ ಪ್ರಶಂಸಿಸಿ, ಮಕ್ಕಳು ಇದರಿಂದ ಹೆಚ್ಚು ಕಲಿಕಾಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿದೆಯೆಂದು ಎಲ್ಲರೂ ಅಭಿಪ್ರಾಯ ಪಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ಮಕ್ಕಳ ಆನ್ಲೈನ್ ಕ್ಲಾಸ್ ವೀಕ್ಷಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ತೀರ್ಮಾನಿಸಿದಂತೆ ಮೂರು ಕಲಿಕಾ ಕೇಂದ್ರಗಳ ವ್ಯವಸ್ಥೆ ಮಾಡಲಾಯಿತು. ಕುಳೂರು ಕಮ್ಯೂನಿಟಿ ಹಾಲ್, ಚಿನಾಲ ಅಂಗನವಾಡಿ ಹಾಗೂ ಮಡಿಮುಗೇರಿನ ಎಂ. ಜಿ. ಎಲ್. ಸಿ ಶಾಲೆ ಅಥವಾ ಸಂತಡ್ಕ ಅಂಗನವಾಡಿಯನ್ನು ಕಲಿಕಾ ಕೇಂದ್ರಗಳಾಗಿ ಗುರುತಿಸಲಾಯಿತು. ಪ್ರತಿ ಕಲಿಕಾ ಕೇಂದ್ರಗಳಲ್ಲಿ ಬರುವ ಮಕ್ಕಳ ವಿವರಗಳನ್ನು ಶಿಕ್ಷಕಿ ನಯನ ಎಂ ನೀಡಿದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರೀತ  ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಹಾಗೂ ಪಿ. ಟಿ. ಎ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.






No comments:

Post a Comment