FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 7 June 2021

ಶಾಲಾಭಿವೃದ್ಧಿ ಸಮಿತಿ ಸಭೆ

                 ಕೊರೋನ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲೂ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದ್ದು, ಕಳೆದ ವರ್ಷದಲ್ಲಿ ನಡೆದ ಆನ್ಲೈನ್ ಕ್ಲಾಸುಗಳನ್ನು ನೋಡಲು ಸರಿಯಾದ ವ್ಯವಸ್ಥೆ ಇಲ್ಲದೇ ಹಲವು ಮಕ್ಕಳು ಆನ್ಲೈನ್  ಶಿಕ್ಷಣ ವಂಚಿತರಾಗಿರುವುದನ್ನು ಕಂಡು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಇಲಾಖೆಯ ಸೂಚನೆಯಂತೆ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ವಿದ್ಯಾಭಿಮಾನಿಗಳ ಸಹಯೋಗದಲ್ಲಿ ಸಭೆ ಸೇರಲಾಯಿತು. ಸಭೆಯಲ್ಲಿ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಅಧ್ಯಕ್ಷೆ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಅಧ್ಯಕ್ಷ ಸತೀಶ್ ಎಲಿಯಾಣ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ ರವರು ನಮ್ಮ ಕುಳೂರು ಶಾಲಾ ಮಕ್ಕಳ ಆನ್ಲೈನ್ ಕ್ಲಾಸ್ ವೀಕ್ಷಣೆಯ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ಆನ್ಲೈನ್ ಕ್ಲಾಸ್ ವೀಕ್ಷಣೆಯು ವ್ಯವಸ್ಥೆ ಇಲ್ಲದ 9 ಮಕ್ಕಳನ್ನು ಗುರುತಿಸಿ ಅವರ ವಿವರವನ್ನು ಶಿಕ್ಷಕಿ ನಯನ ಎಂ ಮುಂದಿಟ್ಟರು. ಸಭೆಯಲ್ಲಿ ಈ 9 ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಜೊತೆಗೆ ಆ ಕ್ಷಣದಲ್ಲೇ 9 ಸ್ಮಾರ್ಟ್ ಫೋನುಗಳ ಪ್ರಾಯೋಜಕತ್ವವನ್ನು ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ವಹಿಸಿಕೊಂಡರು. ಪ್ರಾಯೋಜಕತ್ವವನ್ನು ವಹಿಸಿದವರ ವಿವರ ಈ ಕೆಳಗಿನಂತಿವೆ. 

1) ಜನಾರ್ಧನ ಪೂಜಾರಿ ಕುಳೂರು (ವಾರ್ಡ್ ಸದಸ್ಯರು) ಮತ್ತು ಚಿಕ್ಕಪ್ಪ ಶೆಟ್ಟಿ ಎಲಿಯಾಣ (ಕೋಶಾಧಿಕಾರಿ,ಹಳೆ ವಿದ್ಯಾರ್ಥಿ ಸಂಘ)

2) ಸತೀಶ್ ಎಲಿಯಾಣ (ಅಧ್ಯಕ್ಷರು,ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘ) 

3) ರಾಜೇಶ್ ಸೇನವ ನಾರ್ಣಹಿತ್ಲು, ಕಿಶನ್ ಶೆಟ್ಟಿ ಎಲಿಯಾಣ, ಶಿವಪ್ರಸಾದ್ ಶೆಟ್ಟಿ ಕೊಡಿಮಾರ್ ಕುಳೂರು.

4) ಶಾಲಾ ರಕ್ಷಕ-ಶಿಕ್ಷಕ ಸಂಘ

5) ಶಾಲಾ ಹಳೆ ವಿದ್ಯಾರ್ಥಿ ಸಂಘ

6) ಫ್ರೆಂಡ್ಸ್ ಕುಳೂರು

7) ಸ್ನೇಹ ಆರ್ಟ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ಕುಳೂರು ಶಾಂತಿನಗರ

8) ಸ್ಪಂದನ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಎಲಿಯಾಣ

9) ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ


ಪ್ರಾಯೋಜಕತ್ವವನ್ನು ವಹಿಸಿದ ಎಲ್ಲರನ್ನೂ ಶಾಲಾ ಪರವಾಗಿ ಅಭಿನಂದಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.






No comments:

Post a Comment