FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 17 September 2021

ತರಕಾರಿ ಕೃಷಿಗೆ ಶ್ರಮದಾನ

       ಶಾಲೆಯಲ್ಲಿ ನಡೆಸಲುದ್ದೇಶಿಸಿದ ತರಕಾರಿ ಕೃಷಿಯ ಕೆಲಸಕ್ಕಾಗಿ ಇಂದು ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶ್ರಮದಾನ ನಡೆಸಲಾಯಿತು. ಜೊತೆಗೆ ಶಾಲೆಯ ಸುತ್ತ ಬೆಳೆದಿದ್ದ ಪೊದರುಗಳನ್ನು ತೆಗೆದು ಶಾಲಾ ಪರಿಸರ ಸ್ವಚ್ಚ ಮಾಡಲಾಯಿತು.

      ಇಂದಿನ ಈ ಶ್ರಮದಾನದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಸದಸ್ಯರಾದ ಹರಿಣಾಕ್ಷಿ ಕೇಮಜಾಲ್, ಕುಶಾಲಾಕ್ಷಿ ಎಲಿಯಾಣ, ಸುಶೀಲ ಚಿನಾಲ, ಲೀಲಾವತಿ ಚಿನಾಲ ಹಾಗೂ ಶಾಲಾ ಮುಖ್ಯೋಧ್ಯಾಯರು ಮತ್ತು ಶಿಕ್ಷಕ ವೃಂದ ಕೈ ಜೋಡಿಸಿ ಯಶಸ್ವಿಗೊಳಿಸಿದರು. ಇಂದಿನ ಶ್ರಮದಾನದಲ್ಲಿ ಬೆಳಗಿನ ಚಾ ಮತ್ತು ತಿಂಡಿಯ ವ್ಯವಸ್ಥೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಯೋಗೀಶ್ ಶೆಟ್ಟಿ ಪೊಯ್ಯೆಲ್, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕಮಲಾಕ್ಷ ಕಲ್ಕಾರ್ ಮಾಡಿದರು. ಚಾ ತಿಂಡಿ, ಊಟದ ವ್ಯವಸ್ಥೆ ಮಾಡಿದವರಿಗೆ ಹಾಗೂ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲಾ ಪರವಾಗಿ ಧನ್ಯವಾದ ಸಲ್ಲಿಸಲಾಯಿತು.








No comments:

Post a Comment