FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 21 June 2023

ವಿಶ್ವ ಯೋಗ ದಿನಾಚರಣೆ:

        ಭಾರತದ ಭವ್ಯ ಪರಂಪರೆಯಲ್ಲಿ ಯೋಗ ವಿಶೇಷ ಸ್ಥಾನವನ್ನು ಪಡೆದಿದೆ. ವಿಶ್ವವೇ ಯೋಗವನ್ನು ಅನುಸರಿಸುತ್ತಿದ್ದು ಭಾರತದ ಸಂಸ್ಕೃತಿಯು ಇನ್ನಷ್ಟು ಶ್ರೇಷ್ಠತೆಯನ್ನು ಪಡೆಯುತ್ತಿದೆ. ಅಂತಹ ಯೋಗವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಕಳೆದ ಹಲವು ವರ್ಷಗಳಿಂದ ಜೂನ್ 21 ನ್ನು ವಿಶ್ವ ಯೋಗ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

         ಯೋಗ ದಿನಾಚರಣೆಗೆ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಚಾಲನೆಯಿತ್ತರು. ಮೀಂಜ ಪಂಚಾಯತಿನ ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಕೆ ಉಪಸ್ಥಿತರಿದ್ದರು. ಬಳಿಕ ಮೀಂಜ ಹೋಮಿಯೋಪತಿ ಆಸ್ಪತ್ರೆಯ ಸಿಬ್ಬಂದಿಗಳಾದ ದಿಲ್ನ ಹಾಗೂ ದಿವ್ಯ ರವರು ಶಾಲಾ ಮಕ್ಕಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು. ಇವರೊಂದಿಗೆ ಹೋಮಿಯೋಪತಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ವಿಶೇಷ ಪ್ರದರ್ಶನ ನೀಡಿದರು.

        ಶಾಲಾ ಮಕ್ಕಳಿಗೆ ವಿವಿಧ ಸರಳ ಯೋಗಾಸನಗಳನ್ನು ಮಾಡಿ, ಅವುಗಳಿಂದಿರುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು. ಶಾಲಾ ಶಿಕ್ಷಕ ವೃಂದ ಜೊತೆಗಿದ್ದು ಸಹಕರಿಸಿದರು.


















No comments:

Post a Comment