2024-25 ನೇ ಸಾಲಿನ ನಾಲ್ಕನೇ ತರಗತಿ ಮಕ್ಕಳ ರಕ್ಷಕರು ಶಾಲೆಗೆ ಟೇಬಲ್ ಹಾಗೂ ಚಯರನ್ನು ಕೊಡುಗೆ ನೀಡುವ ಮೂಲಕ ತಮ್ಮ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ ವಿದ್ಯಾಲಯಕ್ಕೆ ನೆನಪಿನ ಕಾಣಿಕೆಯನ್ನು ನೀಡಿ ಗಮನ ಸೆಳೆದರು.
ಉತ್ತಮ ಗುಣಮಟ್ಟದ ಟೇಬಲ್ ಹಾಗೂ ಚಯರನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ನಾಲ್ಕನೇ ತರಗತಿ ಮಕ್ಕಳು ಹಾಗೂ ಹೆತ್ತವರು, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.ಕೊಡುಗೆ ನೀಡಲು ಸಹಕರಿಸಿದ ನಾಲ್ಕನೇ ತರಗತಿಯ ಮಕ್ಕಳ ಎಲ್ಲಾ ರಕ್ಷಕರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment