FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 9 July 2025

ಕುಳೂರು ಶಾಲೆಯಲ್ಲಿ ಪ್ರಜಾಪ್ರಭುತ್ವದ ಪರಿಚಯ ; ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಚುನಾವಣೆ :

        ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ಶಾಲಾ ಚುನಾವಣೆಯನ್ನು ನಡೆಸಲಾಯಿತು. 

      ಆ ಪ್ರಯುಕ್ತ ಎರಡು ದಿನಗಳ  ಹಿಂದೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ನಡೆಯಿತು. ಜೊತೆಗೆ ಮತಯಾಚನೆಯನ್ನೂ ಮಾಡಿದರು.

       ಚುನಾವಣೆಯ ದಿವಸ ಶಾಲಾ ಮಕ್ಕಳು ಸರದಿ ಸಾಲಿನಲ್ಲಿ ಬಂದು ಮತದಾನದ ಗುರುತನ್ನು ತಮ್ಮ ಕೈ ಬೆರಳುಗಳಿಗೆ ಹಾಕಿ ಗೌಪ್ಯ ಮತದಾನದ ಮೂಲಕ ತಮ್ಮ ನೆಚ್ಛಿನ ಅಭ್ಯರ್ಥಿಗಳಿಗೆ ಮತವನ್ನು ಹಾಕಿದರು.

        ಮತದಾನ ಪ್ರಕ್ರಿಯೆಯ ಎಲ್ಲಾ ಕಾರ್ಯಗಳನ್ನು ಮಕ್ಕಳೇ ನಿರ್ವಹಿಸಿದರು.

      ಮತದಾನದ ಬಳಿಕ ಶಾಲಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕಿಯ ನೇತ್ರತ್ವದಲ್ಲಿ ಮತ ಎಣಿಕೆ ನಡೆಯಿತು. ಎಲ್ಲರ ಸಮ್ಮುಖದಲ್ಲಿ ಫಲಿತಾಂಶವನ್ನು ಘೋಷಿಸಿದರು.

       ಶಾಲಾ ನಾಯಕನಾಗಿ ಉಲ್ಲಾಸ್ ಕೆ., ಉಪನಾಯಕಿಯಾಗಿ ಕುಮಾರಿ ವೀಕ್ಷಿತ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ವಿಜೇತ ಅಭ್ಯರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು‌.

      ಇದೇ ಸಂದರ್ಭದಲ್ಲಿ ಮಂತ್ರಿ ಮಂಡಲವನ್ನೂ ರಚಿಸಲಾಯಿತು. ಸಾಂಸ್ಕೃತಿಕ ಮಂತ್ರಿಯಾಗಿ ಕುಮಾರಿ ವೀಕ್ಷಿತ, ಕ್ರೀಡಾ ಮಂತ್ರಿಯಾಗಿ ಕುಮಾರಿ ತನ್ವಿ, ಆರೋಗ್ಯ ಮಂತ್ರಿಯಾಗಿ ಕುಮಾರಿ ಸಾತ್ವಿಕ ಪಿ. ಶೆಟ್ಟಿ ಆಯ್ಕೆಯಾದರು.

      ಬಳಿಕ ವಿಜೇತ ಅಭ್ಯರ್ಥಿಗಳ ವಿಜಯಯಾತ್ರೆ ಮೆರವಣಿಗೆ ನಡೆಯಿತು.

      ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದು, ಸಹಕರಿಸಿದರು.




























No comments:

Post a Comment