ವಾರ್ತಾ ಮಾಧ್ಯಮವು ಈಗಿನ ಶಕ್ತಿಯುತ ಮಾಧ್ಯಮವಾಗಿದೆ. ಅದರಲ್ಲೂ ಈಗ ಡಿಜಿಟಲ್ ಮಾಧ್ಯಮವು ಹೆಚ್ಚು ಪ್ರಚಲಿತವಾಗಿದೆ. ಇದನ್ನು ಶಾಲಾ ಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಮಾಡಲು ಕುಳೂರು ಶಾಲೆಯ ಸುದ್ದಿಪ್ರಸಾರಕ್ಕಾಗಿ ಮಾಡಿದ ಕುಳೂರುವಾಣಿ ಮತ್ತು ಕುಳೂರು ವಾಹಿನಿಯ ಬಿಡುಗಡೆಯು ಇಂದು ಶಾಲೆಯಲ್ಲಿ ನಡೆಯಿತು.
ಆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಅಧ್ಯಕ್ಷತೆ ವಹಿಸಿದ್ದರು. ಕುಳೂರುವಾಣಿ ಎಂಬ ಡಿಜಿಟಲ್ ಮಾಸ ಪತ್ರಿಕೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರುರವರು ಬಿಡುಗಡೆಗೊಳಿಸಿದರು. ಸಾಮಾಜಿಕ ಜಾಲತಾಣದ ಮಾಧ್ಯಮವಾಗಿ ಕುಳೂರುವಾಹಿನಿಯು ಆರಂಭಗೊಂಡು ಇದರ ಬಿಡುಗಡೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲರವರು ನಡೆಸಿ ಶುಭ ಕೋರಿದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ವಂದಿಸಿದರು. ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
No comments:
Post a Comment