ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ರವರು ವಹಿಸಿದ್ದರು. ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಆದರ್ಶನಗರ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಅನುಪಮ ಚಿನಾಲ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ. ರವರು ಶಾಲಾ ಸುರಕ್ಷತೆಯ ಕುರಿತಾಗಿ ರಕ್ಷಕರಿಗೆ ಮಾಹಿತಿ ನೀಡಿ ಶಾಲಾ ಸುರಕ್ಷಾ ಸಮಿತಿಯನ್ನು ರಚಿಸಿದರು.
ನೂತನ ಶಾಲಾ ವ್ಯವಸ್ಥಾಪನಾ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಸತೀಶ್ ಎಲಿಯಾಣ ಅವಿರೋಧವಾಗಿ ಪುನರಾಯ್ಕೆಯಾದರು. ಸದಸ್ಯರಾಗಿ ಶ್ರೀಮತಿ ಪ್ರತಿಭಾ ನಾಯಕ್ ಕುಳಬೈಲ್, ಶ್ರೀಮತಿ ಉದಯಕುಮಾರಿ ಕುಳೂರು, ಶ್ರೀಮತಿ ಶ್ವೇತ ಕೇಮಜಲ್, ಶ್ರೀಮತಿ ಅಶ್ವಿತ ಕೇಮಜಲ್, ಶ್ರೀಮತಿ ಅನುಪಮ ಚಿನಾಲ, ಶ್ರೀಮತಿ ಹರಿಣಾಕ್ಷಿ ಕೇಮಜಲ್, ಶ್ರೀಮತಿ ವಿದ್ಯಾ ಕಾಯರ್ ತೊಟ್ಟಿ, ಶ್ರೀಮತಿ ಲೀಲಾವತಿ ಕುಳೂರು ಕನ್ಯಾನ ಆಯ್ಕೆಯಾದರು.
ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಕವಿತಾ ದೇರಂಬಳ, ಉಪಾಧ್ಯಕ್ಷೆಯಾಗಿ ಶ್ರೀಮತಿ ಉಷಾ ಆದರ್ಶನಗರ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಪ್ರಿಯಾಂಕ ಕೇಮಜಲ್ ಅವಿರೋಧವಾಗಿ ಆಯ್ಕೆಯಾದರು.
ಶಾಲಾ ಶಿಕ್ಷಕಿ ಶ್ರೀಮತಿ ನಯನ ಸ್ವಾಗತಿಸಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
No comments:
Post a Comment