ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆಯ ಭಾಗವಾಗಿ ಇಂದು ಸ್ಥಳೀಯ ಗ್ರಂಥಾಲಯವನ್ನು ಶಾಲಾ ಮಕ್ಕಳು ಸಂದರ್ಶಿಸಿದರು.
ಕುಳೂರು ಚಿನಾಲದಲ್ಲಿರುವ ನವಯುವಕ ಕಲಾವೃಂದ ಗ್ರಂಥಾಲಯಕ್ಕೆ ಶಾಲಾ ಮಕ್ಕಳು ಸಂದರ್ಶನ ನೀಡಿ ಗ್ರಂಥಾಲಯದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಜೊತೆಗೆ ಗ್ರಂಥಾಲಯದಲ್ಲಿ ಇದ್ದ ಹಳೆಯ ವಸ್ತುಗಳ ಸಂಗ್ರಹವನ್ನು ನೋಡಿ ಹಿಂದಿನ ಕಾಲದ ಜನರ ಜೀವನಶೈಲಿಯನ್ನು ತಿಳಿದುಕೊಂಡರು.ನವಯುವಕ ಕಲಾವೃಂದ ಗ್ರಂಥಾಲಯದ ಸಿಬ್ಬಂದಿಗಳಾದ ಶ್ರೀಮತಿ ಕುಶಾಲಾಕ್ಷಿ ಹಾಗೂ ಶ್ರೀಮತಿ ಅಶ್ವಿನಿ ರವರು ಮಕ್ಕಳಿಗೆ ಗ್ರಂಥಾಲಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಶಿಕ್ಷಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಶ್ವೇತ ಇ ಗ್ರಂಥಾಲಯ ಸಂದರ್ಶನವನ್ನು ಸಂಘಟಿಸಿದರು. ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲರವರು ಉಪಸ್ಥಿತರಿದ್ದು ಸಹಕರಿಸಿದರು.
ಗ್ರಂಥಾಲಯ ಸಿಬ್ಬಂದಿಗಳು ಶಾಲಾ ಮಕ್ಕಳಿಗೆ ಲಘು ಪಾನೀಯಾದ ವ್ಯವಸ್ಥೆಯನ್ನು ಮಾಡಿದ್ದರು. ಶಾಲಾ ಪರವಾಗಿ ಅವರಿಗೆ ಧನ್ಯವಾದವನ್ನು ಸಮರ್ಪಿಸಲಾಯಿತು.






No comments:
Post a Comment