ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಶಾಲೆಯನ್ನೊಳಗೊಂಡ ವಾರ್ಡಿನಲ್ಲಿ ಗೆದ್ದು ನೂತನ ವಾರ್ಡ್ ಸದಸ್ಯರಾಗಿ ಆಯ್ಜೆಯಾದ ಶ್ರೀಮತಿ ಶರ್ಮಿಳ ಎಂ. ಶೆಟ್ಟಿ ಯವರು ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು.
ಮಿಂಜ ಪಂಚಾಯತಿನ ಸದಸ್ಯರಾಗಿ ಆಯ್ಕೆಯಾದ ಸಂಭ್ರಮವನ್ನು ಇಂದು ಶಾಲೆಗೆ ಆಗಮಿಸಿ ಶಾಲಾ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ ವೆಜ್ ಬಿರಿಯಾನಿ, ಚಿಕನ್ ಬಿರಿಯಾನಿ ಮತ್ತು ಪಾಯಸ ನೀಡಿ ಎಲ್ಲರೊಂದಿಗೆ ಸಂತಸವನ್ನು ಹಂಚಿಕೊಡರು.ನೂತನವಾಗಿ ವಾರ್ಡ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಶರ್ಮಿಳ ಎಂ. ಶೆಟ್ಟಿ ಯವರಿಗೆ ಶಾಲಾ ಪರವಾಗಿ ಹಾರ್ದಿಕ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನೂತನ ಸದಸ್ಯರ ಕಾಲದಲ್ಲಿ ಕುಳೂರು ವಾರ್ಡ್ ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಹಾಗೂ ಶಾಲೆಗೆ ಇನ್ನಷ್ಟು ಅನುದಾನವನ್ನು ದೊರಕಿಸುವಂತಾಗಲಿ ಎಂದು ಆಶಿಸುತ್ತೇವೆ.





No comments:
Post a Comment