FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 27 August 2024

ಹುಟ್ಟಿದ ದಿನದ ಅಂಗವಾಗಿ ಶಾಲಾ ಹೂದೋಟದಲ್ಲಿ ಹೂಗಿಡ ನೆಟ್ಟ ಯಶ್ವಿಕ್ ಜೆ ಕುಮಾರ್

         ನಾಲ್ಕನೇ ತರಗತಿಯ ವಿದ್ಯಾರ್ಥಿ ಯಶ್ವಿಕ್ ಜೆ ಕುಮಾರ್ ತನ್ನ ಹುಟ್ಟಿದ ದಿನದ ಅಂಗವಾಗಿ ಶಾಲಾ ಹೂದೋಟದಲ್ಲಿ ಹೂಗಿಡ ನೆಡುವ ಮೂಲಕ ಮಾದರಿಯಾದನು. ಯಶ್ವಿಕ್ ಗೆ ಹುಟ್ಟು ಹಬ್ಬದ ಶುಭಾಶಯಗಳು



Friday, 23 August 2024

ಮೀಂಜ ಪಂಚಾಯತು ವತಿಯಿಂದ ಕುಳೂರು ಶಾಲೆಗೆ ಜೈವಿಕ ಕಂಪೋಸ್ಟ್ ಪಿಟ್

        ಮೀಂಜ ಗ್ರಾಮ ಪಂಚಾಯತು ವತಿಯಿಂದ ನಮ್ಮ ಕುಳೂರು ಶಾಲೆಗೆ ಜೈವಿಕ ಕಾಂಪೋಸ್ಟ್ ಪಿಟ್ (Bio-compost pit) ನ್ನು ಮಂಜೂರು ಮಾಡಿರುತ್ತಾರೆ‌. ಇದರ ಕಾಮಗಾರಿಯು ಪೂರ್ಣಗೊಂಡಿದ್ದು ಉಪಯೋಗಕ್ಕೆ ತಯಾರಾಗಿದೆ. ಇದನ್ನು ಇಂದು ನಮ್ಮ ವಾರ್ಡಿನ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. ಶಾಲಾ ವತಿಯಿಂದ ಮೀಂಜ ಗ್ರಾಮ ಪಂಚಾಯತಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸಲಾಯಿತು.



Thursday, 22 August 2024

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಶಾಲಾ‌ ವಿದ್ಯಾರ್ಥಿ :

          ನಮ್ಮ ಶಾಲಾ ವಿದ್ಯಾರ್ಥಿ ಜ್ಞಾನ್ ಜೆ ಶೆಟ್ಟಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಹೂದೋಟಕ್ಕೆ ಹೂಕುಂಡ ಸಮೇತವಾದ ನಾಲ್ಕು ಹೂಗಿಡವನ್ನು ನೀಡಿದನು.

        ಜ್ಞಾನ್ ಜೆ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು 



Friday, 16 August 2024

ಶಾಲಾಪುಟಾಣಿ ದನ್ವಿನ್ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಗೆ ಸ್ಪೋರ್ಟ್ಸ್ ಕಿಟ್ ಕೊಡುಗೆ ನೀಡಿದ ಹೆತ್ತವರು :

         ಇಂದು ನಮ್ಮ ಶಾಲೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ರಕ್ಷಿತ್ ಹಾಗೂ ಶ್ರೀಮತಿ ಪೃಥ್ವಿ ದಂಪತಿ ತಮ್ಮ ಮಗು ದನ್ವಿನ್ ನ ಮೊದಲನೇ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಆಟೋಪಕರಣಗಳನ್ನೊಳಗೊಂಡ ಸ್ಪೊರ್ಟ್ಸ್ ಕಿಟ್ ಹಾಗೂ ಸಿಹಿ ತಿಂಡಿ‌ ಹಂಚಿದರು. ಇವರಿಗೆ ಶಾಲಾ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.

Thursday, 15 August 2024

ಕುಳೂರು ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ ; ಸಾಧಕರಿಗೆ ಸನ್ಮಾನ :

       ದೇಶದಾದ್ಯಂತ ಆಚರಿಸುವ 78 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

Wednesday, 14 August 2024

ಕುಳೂರು ಶಾಲೆಯಲ್ಲಿ ಆಷಾಡ ಸಂಭ್ರಮ ; ವಿವಿಧ ಖಾದ್ಯಗಳ ತಯಾರಿಕೆ ಹಾಗೂ ಸಹಭೋಜನ :

           ಆಷಾಡ ಮಾಸದ ವಿಶೇಷತೆಯ ಕುರಿತು ಮಕ್ಕಳಲ್ಲಿ ತಿಳುವಳಿಕೆ‌ ಮೂಡಿಸಲು ಹಾಗೂ ಹಿಂದಿನ‌ ಕಾಲದ‌ ಜನರು ಆಷಾಡ ಮಾಸ‌‌ ಅಥವಾ ಆಟಿ ತಿಂಗಳಲ್ಲಿ‌‌ ಅನುಭವಿಸುತ್ತಿದ್ದ ಕಷ್ಟ, ಸಮಸ್ಯೆಗಳು ಹಾಗೂ ಅದರಿಂದ‌ ಅವರು ಕಂಡುಕೊಳ್ಳುತ್ತಿದ್ದ ಪರಿಹಾರ ಮಾರ್ಗಗಳ‌ ಕುರಿತು ತಿಳಿಯಲು 'ಆಷಾಡ ಸಂಭ್ರಮ' ಎಂಬ ವಿಶೇಷ ಕಾರ್ಯಕ್ರಮವನ್ನು‌ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯಲ್ಲಿ ನಡೆಸಲಾಯಿತು. 

Tuesday, 13 August 2024

ಬೇಬಿ ತತ್ಸವಿ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನ ನೀಡಿದ ಹೆತ್ತವರು

           ಇಂದು ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀ ಮನೋಜ್ ಶೆಟ್ಟಿ ಚಾರ್ಲ ಹಾಗೂ ಸ್ವಾತಿ ಶೆಟ್ಟಿ ಚಾರ್ಲ ಇವರ ಮುದ್ದಿನ ಮಗಳಾದ ಬೇಬಿ ತತ್ಸವಿಯ ಹುಟ್ಟಿದ ಹಬ್ಬದ ಪ್ರಯುಕ್ತ ನಮ್ಮ ಶಾಲೆಯ ಮಕ್ಕಳಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನಾನ್ ವೆಜ್ ಬಿರಿಯಾನಿ, ವೆಜ್ ಬಿರಿಯಾನಿ, ಐಸ್ ಕ್ರೀಂ ನೀಡಿದರು.