FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 23 August 2024

ಮೀಂಜ ಪಂಚಾಯತು ವತಿಯಿಂದ ಕುಳೂರು ಶಾಲೆಗೆ ಜೈವಿಕ ಕಂಪೋಸ್ಟ್ ಪಿಟ್

        ಮೀಂಜ ಗ್ರಾಮ ಪಂಚಾಯತು ವತಿಯಿಂದ ನಮ್ಮ ಕುಳೂರು ಶಾಲೆಗೆ ಜೈವಿಕ ಕಾಂಪೋಸ್ಟ್ ಪಿಟ್ (Bio-compost pit) ನ್ನು ಮಂಜೂರು ಮಾಡಿರುತ್ತಾರೆ‌. ಇದರ ಕಾಮಗಾರಿಯು ಪೂರ್ಣಗೊಂಡಿದ್ದು ಉಪಯೋಗಕ್ಕೆ ತಯಾರಾಗಿದೆ. ಇದನ್ನು ಇಂದು ನಮ್ಮ ವಾರ್ಡಿನ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. ಶಾಲಾ ವತಿಯಿಂದ ಮೀಂಜ ಗ್ರಾಮ ಪಂಚಾಯತಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸಲಾಯಿತು.



No comments:

Post a Comment