FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 8 October 2025

ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಲಿಹಾನ್ ನ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟ ಮತ್ತು ಶಾಲೆಗೆ ತೆಂಗಿನಗಿಡದ ಕೊಡುಗೆ :

          ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಲಿಹಾನ್ ನ‌ ಹುಟ್ಟುಹಬ್ಬ ಹಾಗೂ ಮನೆಗೆ ಪುಟ್ಟ ತಮ್ಮ ಕೃತಾರ್ಥ್'ನ ಆಗಮನದ ಸಂತೋಷಕ್ಕಾಗಿ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ವಿಶೇಷ ಮಧ್ಯಾಹ್ನದೂಟದ ವ್ಯವಸ್ಥೆ ಮಾಡಲಾಯಿತು. 

        ಲಿಹಾನ್ ನ ಹೆತ್ತವರಾದ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಹಾಗೂ ಶ್ರೀಮತಿ ಅಶ್ವಿನಿಯವರು ಶಾಲಾ ಮಧ್ಯಾಹ್ನದೂಟಕ್ಕೆ ವೆಜ್ ಮತ್ತು ನಾನ್ ವೆಜ್ ಊಟ ಹಾಗೂ ಪಾಯಸದ ವ್ಯವಸ್ಥೆ ಮಾಡಿದ್ದರು. ಜೊತೆಗೆ ಶಾಲಾ ಪರಿಸರದಲ್ಲಿ ತೆಂಗಿನಸಸಿಯನ್ನು ನೆಡುವುದರ ಮೂಲಕ ಲಿಹಾನ್ ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಇವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.

          ಪುಟಾಣಿ ಲಿಹಾನ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...







No comments:

Post a Comment