FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 15 June 2026

ಸದಾಶಿವ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

 


ತುಳುನಾಡ ಕಣ್ಮನಿ, ಬಡವರ ಬಂಧು ಡಾ. ಸದಾಶಿವ ಕೆ‌ ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಕುಳೂರು ಶಾಲಾ ಮಕ್ಕಳಿಗೆ ವಿಶೇಷ ಭೋಜನ :

         ಕಾಸರಗೋಡು, ದಕ್ಷಿಣ-ಕನ್ನಡ, ಉಡುಪಿ ಹೀಗೆ ತುಳುನಾಡಿನೆಲ್ಲೆಡೆ ತಮ್ಮ ದಾನ ಧರ್ಮಗಳಿಂದ ಹೆಸರುವಾಸಿಯಾದ ತುಳುನಾಡ ಕಣ್ಮನಿ, ಬಡವರ ಬಂಧು, ಕುಳೂರು ಶಾಲಾ ಮಹಾಪೋಷಕರಾದ ಶ್ರೀ ಡಾ. ಸದಾಶಿವ ಕೆ‌ ಶೆಟ್ಟಿ ಯವರ ಜನ್ಮದಿನದ ಪ್ರಯುಕ್ತ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ವತಿಯಿಂದ ಇಂದು ಕುಳೂರು ಶಾಲಾ ಮಕ್ಕಳಿಗೆ ಮಧ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. 

Friday, 5 June 2026

ಕುಳೂರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ :

          ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

Monday, 1 June 2026

ಕುಳೂರು ಶಾಲೆಯಲ್ಲಿ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ :

          2026-27 ನೇ ಶೈಕ್ಷಣಿಕ ವರ್ಷದ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಜರಗಿತು.