FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday, 22 June 2024

2024-25 ನೇ ಸಾಲಿನ ಶಾಲಾ ನಾಯಕನ ಆಯ್ಕೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ:

       ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ 2024-25 ನೇ ಸಾಲಿನ ಶಾಲಾ ನಾಯಕನ ಆಯ್ಕೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. 

      ಶಾಲಾ ವಿದ್ಯಾರ್ಥಿಗಳಾದ ನಿಶ್ವಿತ್, ಪ್ರಥಮ್ ಭಾರದ್ವಾಜ್ ಪಿ.ಎಚ್, ವಂಶಿಕ್, ಯಶ್ವಿಕ್ ಜೆ ಕುಮಾರ್ ಹಾಗೂ ಹನ್ವಿಕ ಶಾಲಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಾಗಿದ್ದು ಅವರು ಶಾಲಾ ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಾಲಾ ಮುಖ್ಯ ಶಿಕ್ಷಕಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

      ಅಭ್ಯರ್ಥಿಗಳು ಎಲ್ಲಾ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಮತ ಯಾಚನೆ ಮಾಡಿದರು.










No comments:

Post a Comment