FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 26 June 2024

ಕುಳೂರು ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ; 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ಇಂದು ನಡೆಯಿತು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣರವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಕಳೆದ‌ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಲೆಕ್ಕಪತ್ರ ಮಂಡಿಸಿದರು.

       ಬಳಿಕ 2024-25 ನೇ ಸಾಲಿನ ನೂತನ ಶಾಲಾ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷರಾಗಿ ಶ್ರೀ ಸತೀಶ್ ಎಲಿಯಾಣ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಿಭ ಕುಳಬೈಲು, ಸುಚರಿತ ಚಿನಾಲ, ಬಟ್ಯಪ್ಪ ಹೊಸಗದ್ದೆ ಕುಳೂರು, ಅಶ್ವಿತ ಕೇಮಜಲ್, ಭುಜಂಗ ಮೂಲ್ಯ ಎಲಿಯಾಣ, ಹರಿಣಾಕ್ಷಿ ಕೇಮಜಲ್, ಶ್ವೇತ ಕೇಮಜಲ್, ಹೇಮಲತ ಕುಳೂರು, ರವಿರಾಜ್ ಚಿಗುರುಪಾದೆ, ಸತೀಶ್ ಚಿನಾಲ, ಉಷ ಆದರ್ಶನಗರ, ಶಕೀಲ ಕರಿಪ್ಪಾರ್, ಆಯಿಶ ಕುಳೂರು, ಕವಿತ ಎಲಿಯಾಣ, ಮಮತ ಆದರ್ಶನಗರ ಆಯ್ಕೆಯಾದರು.

      ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಉಷ ಆದರ್ಶನಗರ, ಉಪಾಧ್ಯಕ್ಷೆಯಾಗಿ ಶ್ರೀಮತಿ ಹೇಮಲತ ಕುಳೂರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕವಿತ ಎಲಿಯಾಣ, ಶಕೀಲ ಕರಿಪ್ಪಾರ್, ಪ್ರತಿಭ ಕುಳಬೈಲು, ಸುಚರಿತ ಚಿನಾಲ, ಶ್ವೇತ ಕೇಮಜಲ್, ಅಶ್ವಿತ ಕೇಮಜಲ್, ಹರಿಣಾಕ್ಷಿ ಕೇಮಜಲ್, ವಿನೋದ ಸುಣ್ಣಾರ, ನಯನ ಕುಳೂರು, ಪ್ರೇಮಲತ ಕುಳೂರು ಆಯ್ಕೆಯಾದರು. ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಅನುಪಮ ಚಿನಾಲ ಆಯ್ಕೆಯಾದರು.

        ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ಸ್ವಾಗತಿಸಿ, ಶ್ರೀಮತಿ ಶಿಕ್ಷಕಿಯಾಗಿ ಶ್ವೇತ ಇ ವಂದಿಸಿದರು.









No comments:

Post a Comment