FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 19 June 2024

ಕುಳೂರು ಶಾಲಾ ಕಟ್ಟಡಕ್ಕೆ ಸಿಡಿಲು ಬಡಿತ ; ಶಾಲಾ ಕಟ್ಟಡ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿ :

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಡಿಲ ಬಡಿತಕ್ಕೆ ಶಾಲಾ ಕಟ್ಟಡ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. 

      ಇಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಶಾಲಾ ಸಮೀಪ‌ ಸಿಡಿಲು ಬಿದ್ದು ವಿದ್ಯುತ್ ಉಪಕರಣಗಳ ಜೊತೆಗೆ ಕಟ್ಟಡಕ್ಕೆ ಹಾನಿಯಾಗಿದ್ದು ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಶಾಲೆಯಲ್ಲಿದ್ದು ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ.

        ಸ್ಥಳಕ್ಕೆ ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ, ವಿದ್ಯಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಕೆ, ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಬಾಬು ಸಿ. ಕುಳೂರು, ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ ದಿನೇಶ್ ವಿ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಜಿ.ಎಚ್, ಎಂ.ಡಿ.ಎಂ. ಅಧಿಕಾರಿ ಶ್ರೀ ಪ್ರದೀಪ್, ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು ಮೊದಲಾದವರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

       ಮೀಟರ್ ಬಾಕ್ಸ್, ಮೈನ್ ಸ್ವಿಚ್, ವಯರಿಂಗ್ ನ ಜೊತೆಗೆ ಕಟ್ಟಡಕ್ಕೆ ಲಘು ಹಾನಿಯಾಗಿದ್ದು ಸಿಡಿಲಿನ ಭೀಕರ ಶಬ್ದಕ್ಕೆ ಮಕ್ಕಳು ಭಯಬೀತರಾಗಿದ್ದರು. 










No comments:

Post a Comment