ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ನಡೆಯಿತು.
FLASH NEWS
Monday, 30 June 2025
Thursday, 26 June 2025
ಬಾಲಸಭೆ, ವಿದ್ಯಾರಂಗ ಉದ್ಘಾಟನೆ
ಮಕ್ಕಳ ಸುಪ್ತ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಬಾಲಸಭೆ ಹಾಗೂ ವಿದ್ಯಾರಂಗದ ಉದ್ಘಾಟನಾ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು.
ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ ನಡೆಯಿತು.
ಮಾಸ್ಟರ್ ಧನ್ವಿನ್ ಹುಟ್ಟು ಹಬ್ಬಕ್ಕೆ ಭರ್ಜರಿ ಮಧ್ಯಾಹ್ನದೂಟವನ್ನು ನೀಡಿದ ಹೆತ್ತವರು :
ಮಾಸ್ಟರ್ ಧನ್ವಿನ್ ನ ಎರಡನೇ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ಇಂದು ಭರ್ಜರಿ ಮಧ್ಯಾಹ್ನದೂಟವನ್ನು ನೀಡಲಾಯಿತು.
ವಿಶ್ಚ ಮಾದಕ ದ್ರವ್ಯ ವಿರೋಧಿ ದಿನಾಚರಣೆ :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
Wednesday, 25 June 2025
ಕುಳೂರು ಬೀಡು ದಾಸಣ್ಣ ಆಳ್ವ ಸ್ಮರಣಾರ್ಥ ಶಾಲಾ ಮಕ್ಕಳಿಗೆ ವಿಶೇಷ ಭೋಜನ :
ಇತ್ತೀಚೆಗೆ ನಮ್ಮನ್ನಗಲಿದ ಕುಳೂರು ಗ್ರಾಮದಲ್ಲಿ ಶಾಲೆಯ ಆರಂಭಕ್ಕೆ ಮುನ್ನುಡಿ ಬರೆದಿದ್ದ ಕುಳೂರು ಬೀಡು ಮನೆತನದ ಹಿರಿಯವರಾದ ಶ್ರೀ ದಾಸಣ್ಣ ಆಳ್ವರು ಇತ್ತೀಚೆಗೆ ನಮ್ಮನ್ನಗಲಿರುವರು. ಅವರ ಸ್ಮರಣಾರ್ಥ ಕುಳೂರು ಬೀಡು ಮನೆತನದವರು ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿರುವರು. ವಿಶೇಷ ಊಟದೊಂದಿಗೆ ಪಾಯಸ, ಲಡ್ಡು, ಹೋಳಿಗೆ, ಚಟ್ಟಂಬಡೆಯನ್ನೂ ನೀಡಲಾಯಿತು.
Monday, 23 June 2025
ವಿಶ್ವ ಯೋಗ ದಿನಾಚರಣೆ :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನದ ಭಾಗವಾಗಿ ಇಂದು ಶಾಲಾ ಮಕ್ಕಳಿಗೆ ಸರಳ ವ್ಯಾಯಾಮ ಹಾಗೂ ಸರಳ ಯೋಗಾಸನಗಳನ್ನು ನಡೆಸಲಾಯಿತು.
Friday, 20 June 2025
ವಾಚನಾ ವಾರಾಚರಣೆಯ ಭಾಗವಾಗಿ ಗ್ರಂಥಾಲಯ ಸಂದರ್ಶನ :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆಯ ಭಾಗವಾಗಿ ಇಂದು ಸ್ಥಳೀಯ ಗ್ರಂಥಾಲಯವನ್ನು ಶಾಲಾ ಮಕ್ಕಳು ಸಂದರ್ಶಿಸಿದರು.
Thursday, 19 June 2025
ಕುಳೂರು ಶಾಲೆಯಲ್ಲಿ ವಾಚನಾ ದಿನಾಚರಣೆಯ ಉದ್ಘಾಟನೆ :
ಕೇರಳದ ಗ್ರಂಥಶಾಲಾ ಪಿತಾಮಹ ಎಂದೇ ಕರೆಯಲ್ಪಡುವ ಪಿ.ಎನ್. ಪಣಿಕ್ಕರ್ ರವರ ಚರಮ ದಿನಾಚರಣೆಯನ್ನು ವಾಚನಾ ದಿನಾಚರಣೆಯನ್ನಾಗಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
Wednesday, 18 June 2025
ಮಜಿಬೈಲ್ ಸಹಕಾರಿ ಬ್ಯಾಂಕ್ ವತಿಯಿಂದ ಶಾಲೆಗೆ ಔಷಧೀಯ ಗಿಡಗಳ ವಿತರಣೆ :
ಮಜಿಬೈಲ್ ಸಹಕಾರಿ ಬ್ಯಾಂಕ್ ನಿಯಮಿತ ಮಜಿಬೈಲ್ ಇದರ ವತಿಯಿಂದ ನಮ್ಮ ಕುಳೂರು ಶಾಲೆಗೆ ಔಷಧೀಯ ಗಿಡಗಳ ವಿತರಣೆ ನಡೆಯಿತು.
Tuesday, 10 June 2025
ಕುಮಾರಿ ಸಾನ್ವಿಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಮಧ್ಯಾಹ್ನದೂಟ:
ಶಾಲೆಯ ಪೂರ್ವ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಹೆತ್ತವರಾದ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಹಾಗೂ ಶ್ರೀಮತಿ ಅಶ್ವಿನಿ ಎಂ. (ಶಾಲಾ ಶಿಕ್ಷಕಿ) ರವರು ಶಾಲಾ ಮಕ್ಕಳ ಮಧ್ಯಾಹ್ನದೂಟದಲ್ಲಿ ವಿಶೇಷವಾಗಿ ಚಿಕನ್ ಕಬಾಬ್, ಪಾಯಸ, ಬಾಳೆಹಣ್ಣು ನೀಡಿ ಸಂಭ್ರಮಿಸಿದರು.
Thursday, 5 June 2025
ಕುಳೂರು ಶಾಲೆಯಲ್ಲಿ ಪರಿಸರ ದಿನಾಚರಣೆ :
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
Monday, 2 June 2025
ಕುಳೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ, ಪ್ರೀ ಪ್ರೈಮರಿ ವಿಭಾಗದ ದತ್ತು ಸ್ವೀಕಾರ ಕಾರ್ಯಕ್ರಮ :
ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಳೆದ ಹಲವು ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ವ್ಯವಸ್ಥಾಪನಾ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ತುಳುನಾಡ ಕೊಡುಗೈ ದಾನಿಯ ಹುಟ್ಟೂರ ಪ್ರೇಮ; ತನ್ನೂರ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು ದತ್ತು ಪಡೆದ ಡಾ. ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ :
ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ.