FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 19 December 2024

ಕುಳೂರು ಶಾಲೆಗೆ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳ ಭೇಟಿ :

       ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿಗೆ ಇಂದು‌ ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳಾದ ಶ್ರೀಯುತ ರಾಜಗೋಪಾಲ ಎನ್. ರವರು ಭೇಟಿ ನೀಡಿದರು. 

Wednesday, 18 December 2024

ಹುಟ್ಟುಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

         ಇಂದು ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಅವನಿಯ ಹುಟ್ಟು ಹಬ್ಬದ ಪ್ರಯುಕ್ತ ಅವಳ ಹೆತ್ತವರು ಶಾಲಾ ಮಕ್ಕಳಿಗೆ ಮಧ್ಯಾಹ್ನ‌ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 

Friday, 13 December 2024

ಕುಳೂರು ಶಾಲೆಯಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ದಿವಸ ಆಚರಣೆ :

         ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ 'ಸಿರಿಧಾನ್ಯ ದಿವಸ' ಆಚರಿಸಲಾಯಿತು. 

Tuesday, 10 December 2024

ಎನ್.ಎಸ್.ಎಸ್. ಸಹವಾಸ ಶಿಬಿರದ ಸಂಘಟನಾ ಸಮಿತಿ ರೂಪೀಕರಣ ಸಭೆ :

        ಇಂದು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇದರ ನೇತೃತ್ವದಲ್ಲಿ ಕ್ರಿಸ್ಮಸ್ ರಜೆಯಲ್ಲಿ ನಡೆಯಲಿರುವ ಎನ್.ಎಸ್.ಎಸ್. ಸಹವಾಸ ಶಿಬಿರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸಲು ಸಂಘಟನಾ ರೂಪೀಕರಣ ಸಭೆ ನಡೆಯಿತು. 

Thursday, 5 December 2024

ಗೃಹಪ್ರವೇಶದ ಪ್ರಯುಕ್ತ ಮಕ್ಕಳಿಗೆ ವಿಶೇಷ ಮಧ್ಯಾಹ್ನದೂಟ :

       ಇಂದು ಕುಳೂರು ಚಿನಾಲದ ಮಠದ ಮನೆಯ ಶ್ರೀ ರವೀಂದ್ರ ದಾಸ್ ಮತ್ತು ಕರುಣಾಕರ ದಾಸ್ ರವರು ತಮ್ಮ ನೂತನ ಮನೆಯ ಗೃಹ ಪ್ರವೇಶದ ಪರವಾಗಿ ಶಾಲಾ ಮಕ್ಕಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದರು. 

Wednesday, 4 December 2024

ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

        ಇಂದು‌ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಕೃತಿಕ್ ನ ಹುಟ್ಟು ಹಬ್ಬದ ಪ್ರಯುಕ್ತ ಅವನ ಹೆತ್ತವರು ಶಾಲಾ ಹೂದೋಟಕ್ಕೆ ಹೂವಿನ  ಗಿಡ, ಮಧ್ಯಾಹ್ನದೂಟದಲ್ಲಿ ಪಾಯಸ, ಶಾಲಾ ಮಕ್ಕಳಿಗೆ ಪೆನ್ಸಿಲ್ ನೀಡಿ ಸಂಭ್ರಮಿಸಿದರು.‌ 

Monday, 2 December 2024

ಹುಟ್ಟುಹಬ್ಬಕ್ಕೆ ವಿಶೇಷ ಮಧ್ಯಾಹ್ನದೂಟ :

      ಇಂದು ಒಂದನೇ ತರಗತಿಯ ವಿದ್ಯಾರ್ಥಿ ಪ್ರದ್ಯುತ್ ಆರ್ ಅಂಚನ್ ನ ಹುಟ್ಟು ಹಬ್ಬದ ಪ್ರಯುಕ್ತ ಅವನ ಹೆತ್ತವರು ಮಧ್ಯಾಹ್ನದೂಟದ ಸಮಯದಲ್ಲಿ ಶಾಲಾ ಮಕ್ಕಳಿಗೆ ಪಲಾವ್ ಹಾಗೂ ಪಾನೀಯ ನೀಡಿ ಸಹಕರಿಸಿದರು. 

Thursday, 21 November 2024

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ನಮ್ಮ ಶಾಲಾ ಪ್ರತಿಭೆಗಳು :

 
















ಹುಟ್ಟು ಹಬ್ಬವನ್ನು ವಿಶೇಷವಾಗಿ ಶಾಲೆಯಲ್ಲಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

       ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಕಾವ್ಯಶ್ರೀಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರ ಹೆತ್ತವರು ಶಾಲಾ ಮಕ್ಕಳಿಗೆ ಸಿಹಿತಿಂಡಿ, ಪೆನ್ಸಿಲ್, ಪಾಯಸ ಹಾಗೂ ಶಾಲಾ ಮಧ್ಯಾಹ್ನದೂಟಕ್ಕೆ 25 ತೆಂಗಿನಕಾಯಿಗಳನ್ನು ನೀಡಿರುತ್ತಾರೆ. 

Thursday, 14 November 2024

ಕುಳೂರು ಶಾಲೆಯಲ್ಲಿ ನಡೆದ ಸಂಭ್ರಮದ ಮಕ್ಕಳ ದಿನಾಚರಣೆ :

      ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ಮಕ್ಕಳ‌‌ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 

Friday, 25 October 2024

ವೃತ್ತಿ ಪರಿಚಯ ಮೇಳದಲ್ಲಿ ಓವರಾಲ್ ರನ್ನರ್ ಅಪ್ ಸ್ಥಾನ ಪಡೆದ ಕುಳೂರು ಶಾಲೆ :

          ಮಂಜೇಶ್ವರ ಉಪಜಿಲ್ಲಾ‌ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಶಾಲಾ ಸ್ಪರ್ಧಾಳುಗಳು ಅದ್ಭುತ ಪ್ರದರ್ಶನ‌ ನೀಡಿ 69 ಅಂಕಗಳೊಂದಿಗೆ ಓವರಾಲ್ ರನ್ನರ್ ಅಪ್ (ದ್ವಿತೀಯ) ಸ್ಥಾನ ಪಡೆದು ಶಾಲೆಗೆ, ಊರಿಗೆ ಕೀರ್ತಿಯನ್ನು ತಂದಿರುತ್ತಾರೆ.   

Tuesday, 15 October 2024

ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಊಟ ನೀಡಿದ ಹೆತ್ತವರು :

        ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿ ಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವಳ ತಾಯಿ ಶ್ರೀಮತಿ ಆರತಿ ಶೆಟ್ಟಿ ಹಾಗೂ ಅಜ್ಜ ಅಜ್ಜಿಯರಾದ ಪೊಯ್ಯೇಲು ಶ್ರೀ ಶಶಿಧರ ಶೆಟ್ಟಿ ಹಾಗೂ ಶ್ರೀಮತಿ ಜಲಜ (ನಮ್ಮ ಶಾಲಾ ಅಡುಗೆಯಾಳು) ರವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಭೂರಿ ಭೋಜನ ನೀಡಿ ಗಮನ ಸೆಳೆದರು. ಜೊತೆಗೆ ಮಕ್ಕಳಿಗೆ ಐಸ್ ಕ್ರೀಂ ನೀಡಿ ಸಂಭ್ರಮಪಟ್ಟರು. 

Monday, 7 October 2024

ಬಾಲಸಭಾದ ಬಾಲಸದಸ್ಸ್ ಕಾರ್ಯಕ್ರಮದ ಬಹುಮಾನ ವಿತರಣೆ :

         ಬಾಲಸಭಾದ ಬಾಲಸದಸ್ಸ್ ಕಾರ್ಯಕ್ರಮದ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು ಶಾಲೆಯ 4 ನೇ ತರಗತಿ ಮಕ್ಕಳಿಗೆ ನಡೆಸಿದ ಪ್ರಶ್ನೆ ಪೆಟ್ಟಿಗೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. 

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

          ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಲಿಹಾನ್ ಜೆ.ಪಿ. ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ಸಹಪಾಠಿಗಳಿಗೆ ಕಲರಿಂಗ್ ಪುಸ್ತಕ ಮತ್ತು ಕ್ರೆಯೋನ್ಸ್ ನೀಡಿ ಸಂಭ್ರಮಪಟ್ಟನು. 

Wednesday, 2 October 2024

ಕುಳೂರು ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ ; ಸ್ವಚ್ಚತಾ ಕಾರ್ಯಕ್ರಮ :

        ರಾಷ್ಟ್ರಪಿತ ಮೋಹನ್ ದಾಸ್ ಕರಮಚಂದ ಗಾಂಧೀಜಿಯವರ 155 ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದೂರ್ ಶಾಸ್ತ್ರಿಯವರ 120 ನೇ ಜನ್ಮದಿನಾಚರಣೆಯ ಪ್ರಯುಕ್ತ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. 

Friday, 13 September 2024

ಓಣಂ ವಿಶೇಷ ಮಧ್ಯಾಹ್ನದೂಟಕ್ಕೆ ಸಹಕರಿಸಿದವರು :

 


ಕುಳೂರು ಶಾಲೆಯಲ್ಲಿ ಸಂಭ್ರಮದ ಓಣಂ ಆಚರಣೆ :

        ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ನಾಡ ಹಬ್ಬವಾದ ಓಣಂ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

Thursday, 12 September 2024

ಕುಳೂರು‌ ಶಾಲೆಗೆ ಡಯೆಟಿನ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಯು. ಪುರುಶೋತ್ತಮ ದಾಸ್ ಭೇಟಿ :

        ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಶಾಲೆಯ ಅಭಿವೃದ್ಧಿಯನ್ನು ತಿಳಿದು ಡಯೆಟ್ ಮಾಯಿಪ್ಪಾಡಿಯ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಶ್ರೀಯುತ ಯು. ಪುರುಷೋಮ ದಾಸ್ ರವರು ಇಂದು ಶಾಲೆಗೆ ಭೇಟಿ ನೀಡಿ  ಶಾಲಾಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

Tuesday, 10 September 2024

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

        ಪ್ರೀ ಪ್ರೈಮರಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ದ್ರುವಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ತರಗತಿಯ ಎಲ್ಲಾ ಸಹಪಾಠಿಗಳಿಗೆ ಪೆನ್ಸಿಲ್ ಹಾಗೂ ಶಾಲೆಯ ಎಲ್ಲಾ ತರಗತಿಗಳಿಗೆ ಲರ್ನಿಂಗ್ ಚಾರ್ಟ್ ನೀಡುವ ಮೂಲಕ ಗಮನ ಸೆಳೆದಳು. ದ್ರುವಿಗೆ ಹುಟ್ಟು ಹಬ್ಬದ ಶುಭಾಶಯಗಳು.



Wednesday, 4 September 2024

ಶಾಲಾ ಗ್ರಂಥಾಲಯಕ್ಕೆ ಸ್ವರಚಿತ ಕೃತಿ ನೀಡಿದ ಯುವ ಲೇಖಕ ಚೇತನ್ ವರ್ಕಾಡಿ :

          ನಾಲ್ಕನೇ ತರಗತಿಯ ವಿದ್ಯಾರ್ಥಿ ವಂಶಿಕ್ ತನ್ನ ಮಾವನಾದ ಲೇಖಕ, ನಾಟಕ ರಚನೆಗಾರ ಶ್ರೀಯುತ ಚೇತನ್ ವರ್ಕಾಡಿಯವರ ರಚನೆಯ 'ಪೊಸತಿರಿ' ತುಳುಕೃತಿಯನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದನು. ಪುಸ್ತಕವನ್ನು ನೀಡಿದ ಚೇತನ್ ವರ್ಕಾಡಿಯವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.



Tuesday, 3 September 2024

ಹುಟ್ಟಿದ ದಿನದ ಅಂಗವಾಗಿ ಶಾಲಾ ಪರಿಸರದಲ್ಲಿ ತರಕಾರಿ ಗಿಡ ಹಾಗೂ ಹೂಗಿಡ ನೆಟ್ಟ ಕೃಶಾಂಕ್

          ಒಂದನೇ ತರಗತಿಯ ಕೃಶಾಂಕ್ ತನ್ನ ಹುಟ್ಟಿದ ದಿನದ ಅಂಗವಾಗಿ ಇಂದು ಶಾಲಾ ಪರಿಸರದಲ್ಲಿ ತರಕಾರಿ ಗಿಡ ಹಾಗೂ ಹೂಗಿಡವನ್ನು ನೆಟ್ಟು ಗಮನ ಸೆಳೆದನು. ಕೃಶಾಂಕ್ ಗೆ ಹುಟ್ಟು ಹಬ್ಬದ ಶುಭಾಶಯಗಳು



Tuesday, 27 August 2024

ಹುಟ್ಟಿದ ದಿನದ ಅಂಗವಾಗಿ ಶಾಲಾ ಹೂದೋಟದಲ್ಲಿ ಹೂಗಿಡ ನೆಟ್ಟ ಯಶ್ವಿಕ್ ಜೆ ಕುಮಾರ್

         ನಾಲ್ಕನೇ ತರಗತಿಯ ವಿದ್ಯಾರ್ಥಿ ಯಶ್ವಿಕ್ ಜೆ ಕುಮಾರ್ ತನ್ನ ಹುಟ್ಟಿದ ದಿನದ ಅಂಗವಾಗಿ ಶಾಲಾ ಹೂದೋಟದಲ್ಲಿ ಹೂಗಿಡ ನೆಡುವ ಮೂಲಕ ಮಾದರಿಯಾದನು. ಯಶ್ವಿಕ್ ಗೆ ಹುಟ್ಟು ಹಬ್ಬದ ಶುಭಾಶಯಗಳು



Friday, 23 August 2024

ಮೀಂಜ ಪಂಚಾಯತು ವತಿಯಿಂದ ಕುಳೂರು ಶಾಲೆಗೆ ಜೈವಿಕ ಕಂಪೋಸ್ಟ್ ಪಿಟ್

        ಮೀಂಜ ಗ್ರಾಮ ಪಂಚಾಯತು ವತಿಯಿಂದ ನಮ್ಮ ಕುಳೂರು ಶಾಲೆಗೆ ಜೈವಿಕ ಕಾಂಪೋಸ್ಟ್ ಪಿಟ್ (Bio-compost pit) ನ್ನು ಮಂಜೂರು ಮಾಡಿರುತ್ತಾರೆ‌. ಇದರ ಕಾಮಗಾರಿಯು ಪೂರ್ಣಗೊಂಡಿದ್ದು ಉಪಯೋಗಕ್ಕೆ ತಯಾರಾಗಿದೆ. ಇದನ್ನು ಇಂದು ನಮ್ಮ ವಾರ್ಡಿನ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. ಶಾಲಾ ವತಿಯಿಂದ ಮೀಂಜ ಗ್ರಾಮ ಪಂಚಾಯತಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸಲಾಯಿತು.



Thursday, 22 August 2024

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಶಾಲಾ‌ ವಿದ್ಯಾರ್ಥಿ :

          ನಮ್ಮ ಶಾಲಾ ವಿದ್ಯಾರ್ಥಿ ಜ್ಞಾನ್ ಜೆ ಶೆಟ್ಟಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಹೂದೋಟಕ್ಕೆ ಹೂಕುಂಡ ಸಮೇತವಾದ ನಾಲ್ಕು ಹೂಗಿಡವನ್ನು ನೀಡಿದನು.

        ಜ್ಞಾನ್ ಜೆ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು 



Friday, 16 August 2024

ಶಾಲಾಪುಟಾಣಿ ದನ್ವಿನ್ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಗೆ ಸ್ಪೋರ್ಟ್ಸ್ ಕಿಟ್ ಕೊಡುಗೆ ನೀಡಿದ ಹೆತ್ತವರು :

         ಇಂದು ನಮ್ಮ ಶಾಲೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ರಕ್ಷಿತ್ ಹಾಗೂ ಶ್ರೀಮತಿ ಪೃಥ್ವಿ ದಂಪತಿ ತಮ್ಮ ಮಗು ದನ್ವಿನ್ ನ ಮೊದಲನೇ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಆಟೋಪಕರಣಗಳನ್ನೊಳಗೊಂಡ ಸ್ಪೊರ್ಟ್ಸ್ ಕಿಟ್ ಹಾಗೂ ಸಿಹಿ ತಿಂಡಿ‌ ಹಂಚಿದರು. ಇವರಿಗೆ ಶಾಲಾ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.

Thursday, 15 August 2024

ಕುಳೂರು ಶಾಲೆಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ ; ಸಾಧಕರಿಗೆ ಸನ್ಮಾನ :

       ದೇಶದಾದ್ಯಂತ ಆಚರಿಸುವ 78 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

Wednesday, 14 August 2024

ಕುಳೂರು ಶಾಲೆಯಲ್ಲಿ ಆಷಾಡ ಸಂಭ್ರಮ ; ವಿವಿಧ ಖಾದ್ಯಗಳ ತಯಾರಿಕೆ ಹಾಗೂ ಸಹಭೋಜನ :

           ಆಷಾಡ ಮಾಸದ ವಿಶೇಷತೆಯ ಕುರಿತು ಮಕ್ಕಳಲ್ಲಿ ತಿಳುವಳಿಕೆ‌ ಮೂಡಿಸಲು ಹಾಗೂ ಹಿಂದಿನ‌ ಕಾಲದ‌ ಜನರು ಆಷಾಡ ಮಾಸ‌‌ ಅಥವಾ ಆಟಿ ತಿಂಗಳಲ್ಲಿ‌‌ ಅನುಭವಿಸುತ್ತಿದ್ದ ಕಷ್ಟ, ಸಮಸ್ಯೆಗಳು ಹಾಗೂ ಅದರಿಂದ‌ ಅವರು ಕಂಡುಕೊಳ್ಳುತ್ತಿದ್ದ ಪರಿಹಾರ ಮಾರ್ಗಗಳ‌ ಕುರಿತು ತಿಳಿಯಲು 'ಆಷಾಡ ಸಂಭ್ರಮ' ಎಂಬ ವಿಶೇಷ ಕಾರ್ಯಕ್ರಮವನ್ನು‌ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯಲ್ಲಿ ನಡೆಸಲಾಯಿತು. 

Tuesday, 13 August 2024

ಬೇಬಿ ತತ್ಸವಿ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನ ನೀಡಿದ ಹೆತ್ತವರು

           ಇಂದು ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀ ಮನೋಜ್ ಶೆಟ್ಟಿ ಚಾರ್ಲ ಹಾಗೂ ಸ್ವಾತಿ ಶೆಟ್ಟಿ ಚಾರ್ಲ ಇವರ ಮುದ್ದಿನ ಮಗಳಾದ ಬೇಬಿ ತತ್ಸವಿಯ ಹುಟ್ಟಿದ ಹಬ್ಬದ ಪ್ರಯುಕ್ತ ನಮ್ಮ ಶಾಲೆಯ ಮಕ್ಕಳಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನಾನ್ ವೆಜ್ ಬಿರಿಯಾನಿ, ವೆಜ್ ಬಿರಿಯಾನಿ, ಐಸ್ ಕ್ರೀಂ ನೀಡಿದರು. 

Thursday, 11 July 2024

ಕೃಷಿ ಜಮೀನಿಗೆ ಬಯಲು ಪ್ರವಾಸ ಮಾಡಿದ ಕುಳೂರು ಶಾಲಾ ವಿದ್ಯಾರ್ಥಿಗಳು :

         ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲು ಹಾಗೂ ಕೃಷಿ ವಿಧಾನಗಳ‌ ಕುರಿತು ತಿಳಿಯಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಪ್ರವಾಸ ಕೈಗೊಂಡರು. 

Wednesday, 26 June 2024

ಕುಳೂರು ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ; 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ಇಂದು ನಡೆಯಿತು. 

ವಿದ್ಯಾರಂಗ ಮತ್ತು ಬಾಲಸಭೆ ಉದ್ಘಾಟನೆ :

        ಶಾಲಾ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾದ ವಿದ್ಯಾರಂಗ ಮತ್ತು ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. 

ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ :

          ಕೇರಳದಲ್ಲಿ ಗ್ರಂಥಾಲಯಕ್ಕೆ ನಾಂದಿ ಹಾಡಿದ ಪಿ.ಎನ್. ಪಣಿಕ್ಕರ್ ರವರ ಚರಮ ದಿನಾಚರಣೆಯ ಭಾಗವಾಗಿ ಆಚರಿಸಿದ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. 

Tuesday, 25 June 2024

ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ನಾಯಕನ ಆಯ್ಕೆ :

       ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ‌ ನಾಯಕನ ಆಯ್ಕೆಗೆ ಚುನಾವಣೆ ನಡೆಸಲಾಯಿತು. 

Saturday, 22 June 2024

2024-25 ನೇ ಸಾಲಿನ ಶಾಲಾ ನಾಯಕನ ಆಯ್ಕೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ:

       ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ 2024-25 ನೇ ಸಾಲಿನ ಶಾಲಾ ನಾಯಕನ ಆಯ್ಕೆಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. 

Wednesday, 19 June 2024

ಕುಳೂರು ಶಾಲೆಯಲ್ಲಿ ವಾಚನಾ ದಿನಾಚರಣೆ :

        ಕೇರಳದ ಗ್ರಂಥಾಲಯ ಪಿತಾಮಹ ಎಂದೆನಿಸಿಕೊಂಡಿರುವ ಪಿ.ಎನ್. ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ದಿನಾಚರಣೆಯಾಗಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ಕುಳೂರು ಶಾಲಾ ಕಟ್ಟಡಕ್ಕೆ ಸಿಡಿಲು ಬಡಿತ ; ಶಾಲಾ ಕಟ್ಟಡ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿ :

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಡಿಲ ಬಡಿತಕ್ಕೆ ಶಾಲಾ ಕಟ್ಟಡ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. 

ವರ್ಕಾಡಿ ಕೆ.ಇ.ಬಿ. ವತಿಯಿಂದ ಶಾಲಾ ಮಕ್ಕಳಿಗೆ ಮಾಹಿತಿ ಶಿಬಿರ :

        ವರ್ಕಾಡಿಯ ಕೇರಳ ಎಲೆಕ್ಟ್ರಿಕ್ ಬೋರ್ಡ್ ವತಿಯಿಂದ ಶಾಲಾ ಮಕ್ಕಳಿಗೆ ವಿದ್ಯುತ್ ಬಳಕೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಶಿಬಿರವು ನಡೆಯಿತು. 

Thursday, 13 June 2024

ಶಾಲಾ ಮಕ್ಕಳಿಗೆ ರೇಬೀಸ್ ಬಗ್ಗೆ ಮಾಹಿತಿ ಹಾಗೂ ಪ್ರತಿಜ್ಞೆ :

      ಹುಚ್ಚು ನಾಯಿ ಕಡಿತ ಹಾಗೂ ರೇಬೀಸ್ ನ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಇಂದು ವಿಶೇಷ ಅಸೆಂಬ್ಲಿ ನಡೆಸಲಾಯಿತು. 

Wednesday, 12 June 2024

ಬಾಲಕಾರ್ಮಿಕ ವಿರೋಧಿ ದಿನಾಚರಣೆ ; ವಿಶೇಷ ಅಸೆಂಬಿಯಲ್ಲಿ ಮಕ್ಕಳಿಂದ ಪ್ರತಿಜ್ಞೆ ಸ್ವೀಕಾರ :

       ಭಾರತ ದೇಶ ಹಾಗೂ ಇತರ ಅನೇಕ ದೇಶಗಳಲ್ಲಿ ಪಿಡುಗಾಗಿ ಕಾಡುತ್ತಿರುವ ಬಾಲಕಾರ್ಮಿಕತನವನ್ನು ಹೋಗಲಾಡಿಸಲು ಸರಕಾರಗಳು ಅನೇಕ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜೂನ್ 12 ರಂದು ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 

Wednesday, 5 June 2024

ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ :

         ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರವು ನೀಡಿದ ಸಮವಸ್ತ್ರದ ವಿತರಣೆ ಕಾರ್ಯಕ್ರಮ ನಡೆಯಿತು.

         ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣರವರು ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು‌. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.