FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 30 June 2025

ಶಾಲಾ ವ್ಯವಸ್ಥಾಪನಾ ಸಮಿತಿ ಮಹಾಸಭೆ, ನೂತನ ಸಮಿತಿ ರಚನೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ನಡೆಯಿತು. 

Thursday, 26 June 2025

ಬಾಲಸಭೆ, ವಿದ್ಯಾರಂಗ ಉದ್ಘಾಟನೆ

       ಮಕ್ಕಳ ಸುಪ್ತ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಬಾಲಸಭೆ ಹಾಗೂ ವಿದ್ಯಾರಂಗದ ಉದ್ಘಾಟನಾ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು. 

ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ :

         ಕುಳೂರಿನ ಸರಕಾರಿ‌ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ ನಡೆಯಿತು. 

ಮಾಸ್ಟರ್ ಧನ್ವಿನ್ ಹುಟ್ಟು ಹಬ್ಬಕ್ಕೆ ಭರ್ಜರಿ ಮಧ್ಯಾಹ್ನದೂಟವನ್ನು ನೀಡಿದ ಹೆತ್ತವರು :

         ಮಾಸ್ಟರ್ ಧನ್ವಿನ್ ನ ಎರಡನೇ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ಇಂದು ಭರ್ಜರಿ ಮಧ್ಯಾಹ್ನದೂಟವನ್ನು ನೀಡಲಾಯಿತು. 

ವಿಶ್ಚ ಮಾದಕ ದ್ರವ್ಯ ವಿರೋಧಿ ದಿನಾಚರಣೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. 

Wednesday, 25 June 2025

ಕುಳೂರು ಬೀಡು ದಾಸಣ್ಣ ಆಳ್ವ ಸ್ಮರಣಾರ್ಥ ಶಾಲಾ ಮಕ್ಕಳಿಗೆ ವಿಶೇಷ ಭೋಜನ :

        ಇತ್ತೀಚೆಗೆ ನಮ್ಮನ್ನಗಲಿದ ಕುಳೂರು ಗ್ರಾಮದಲ್ಲಿ ಶಾಲೆಯ ಆರಂಭಕ್ಕೆ ಮುನ್ನುಡಿ ಬರೆದಿದ್ದ ಕುಳೂರು ಬೀಡು ಮನೆತನದ ಹಿರಿಯವರಾದ ಶ್ರೀ ದಾಸಣ್ಣ ಆಳ್ವರು ಇತ್ತೀಚೆಗೆ ನಮ್ಮನ್ನಗಲಿರುವರು. ಅವರ ಸ್ಮರಣಾರ್ಥ ಕುಳೂರು ಬೀಡು ಮನೆತನದವರು ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿರುವರು. ವಿಶೇಷ ಊಟದೊಂದಿಗೆ ಪಾಯಸ, ಲಡ್ಡು, ಹೋಳಿಗೆ, ಚಟ್ಟಂಬಡೆಯನ್ನೂ ನೀಡಲಾಯಿತು. 

Monday, 23 June 2025

ವಿಶ್ವ ಯೋಗ ದಿನಾಚರಣೆ :

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನದ ಭಾಗವಾಗಿ ಇಂದು ಶಾಲಾ ಮಕ್ಕಳಿಗೆ ಸರಳ ವ್ಯಾಯಾಮ ಹಾಗೂ ಸರಳ ಯೋಗಾಸನಗಳನ್ನು ನಡೆಸಲಾಯಿತು. 

Friday, 20 June 2025

ವಾಚನಾ ವಾರಾಚರಣೆಯ ಭಾಗವಾಗಿ ಗ್ರಂಥಾಲಯ ಸಂದರ್ಶನ :

        ಕುಳೂರಿನ  ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯಲ್ಲಿ ವಾಚನಾ ವಾರಾಚರಣೆಯ ಭಾಗವಾಗಿ ಇಂದು ಸ್ಥಳೀಯ ಗ್ರಂಥಾಲಯವನ್ನು ಶಾಲಾ ಮಕ್ಕಳು ಸಂದರ್ಶಿಸಿದರು. 

Thursday, 19 June 2025

ಕುಳೂರು ಶಾಲೆಯಲ್ಲಿ ವಾಚನಾ ದಿನಾಚರಣೆಯ ಉದ್ಘಾಟನೆ :

         ಕೇರಳದ ಗ್ರಂಥಶಾಲಾ ಪಿತಾಮಹ ಎಂದೇ ಕರೆಯಲ್ಪಡುವ ಪಿ.ಎನ್. ಪಣಿಕ್ಕರ್ ರವರ ಚರಮ ದಿನಾಚರಣೆಯನ್ನು ವಾಚನಾ ದಿನಾಚರಣೆಯನ್ನಾಗಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.   

Wednesday, 18 June 2025

ಮಜಿಬೈಲ್ ಸಹಕಾರಿ ಬ್ಯಾಂಕ್ ವತಿಯಿಂದ ಶಾಲೆಗೆ ಔಷಧೀಯ ಗಿಡಗಳ ವಿತರಣೆ :

       ಮಜಿಬೈಲ್ ಸಹಕಾರಿ ಬ್ಯಾಂಕ್ ನಿಯಮಿತ ಮಜಿಬೈಲ್ ಇದರ ವತಿಯಿಂದ ನಮ್ಮ ಕುಳೂರು ಶಾಲೆಗೆ ಔಷಧೀಯ ಗಿಡಗಳ ವಿತರಣೆ ನಡೆಯಿತು. 

Tuesday, 10 June 2025

ಕುಮಾರಿ ಸಾನ್ವಿಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಮಧ್ಯಾಹ್ನದೂಟ:

      ಶಾಲೆಯ ಪೂರ್ವ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಹೆತ್ತವರಾದ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಹಾಗೂ ಶ್ರೀಮತಿ ಅಶ್ವಿನಿ ಎಂ. (ಶಾಲಾ ಶಿಕ್ಷಕಿ) ರವರು ಶಾಲಾ ಮಕ್ಕಳ ಮಧ್ಯಾಹ್ನದೂಟದಲ್ಲಿ ವಿಶೇಷವಾಗಿ ಚಿಕನ್ ಕಬಾಬ್, ಪಾಯಸ, ಬಾಳೆಹಣ್ಣು ನೀಡಿ ಸಂಭ್ರಮಿಸಿದರು. 

Thursday, 5 June 2025

ಕುಳೂರು ಶಾಲೆಯಲ್ಲಿ ಪರಿಸರ ದಿನಾಚರಣೆ :

         ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

Monday, 2 June 2025

ಕುಳೂರು ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರವೇಶೋತ್ಸವ, ಪ್ರೀ ಪ್ರೈಮರಿ ವಿಭಾಗದ ದತ್ತು ಸ್ವೀಕಾರ ಕಾರ್ಯಕ್ರಮ :

          ಕುಳೂರು ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯು ಕಳೆದ ಹಲವು ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾ ವ್ಯವಸ್ಥಾಪನಾ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. 

ತುಳುನಾಡ ಕೊಡುಗೈ ದಾನಿಯ ಹುಟ್ಟೂರ ಪ್ರೇಮ; ತನ್ನೂರ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು ದತ್ತು ಪಡೆದ ಡಾ. ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ :

       ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ. 

Sunday, 20 April 2025

ಶಾಲೆಗೆ ಟೇಬಲ್ ಹಾಗೂ ಚಯರ್ ಕೊಡುಗೆ ನೀಡಿದ ನಾಲ್ಕನೇ ತರಗತಿ ಮಕ್ಕಳ ಹೆತ್ತವರು :

          2024-25 ನೇ ಸಾಲಿನ ನಾಲ್ಕನೇ ತರಗತಿ ಮಕ್ಕಳ ರಕ್ಷಕರು ಶಾಲೆಗೆ ಟೇಬಲ್ ಹಾಗೂ ಚಯರನ್ನು ಕೊಡುಗೆ ನೀಡುವ ಮೂಲಕ ತಮ್ಮ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ ವಿದ್ಯಾಲಯಕ್ಕೆ ನೆನಪಿನ ಕಾಣಿಕೆಯನ್ನು ನೀಡಿ ಗಮನ ಸೆಳೆದರು. 

Thursday, 27 March 2025

ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದ ಪುಟಾಣಿ ಯಾನ್ಶ್ :

        ಇಂದು ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಯಾನ್ಶ್ ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುವುದರ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದನು. 

Wednesday, 26 March 2025

ಮೀಂಜ ಪಿ.ಇ.ಸಿ. ವತಿಯಿಂದ ಶಾಲೆಗೆ ಪ್ರೆಶರ್ ಕುಕ್ಕರ್ ಹಾಗೂ ಮಿಕ್ಸರ್ ಗ್ರೈಂಡರ್ ಕೊಡುಗೆ :

          ಮೀಂಜ ಪಂಚಾಯತಿನ ಪಿ.ಇ.ಸಿ. ವತಿಯಿಂದ ನಮ್ಮ ಕುಳೂರು ಶಾಲೆಗೆ ಒಂದು ಪ್ರೆಶರ್ ಕುಕ್ಕರ್ ಹಾಗೂ ಒಂದು‌ ಮಿಕ್ಸರ್ ಗ್ರೈಂಡರನ್ನು ನೀಡಿರುವರು. 

Monday, 17 March 2025

ಕುಳೂರು ಶಾಂತಿನಗರದ ಶ್ರೀ ಗುಳಿಗ ಕೊರಗತನಿಯ ದೈವಗಳ ಪುನರ್ ಪ್ರತಿಷ್ಠಾ ಕಳಶಾಭಿಶೇಕದ ಪ್ರಯುಕ್ತ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟ:

       ಕುಳೂರು ಶಾಂತಿನಗರದ ಶ್ರೀ ಗುಳಿಗ ಕೊರಗತನಿಯ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಕೋಲೋತ್ಸವದ ಪ್ರಯುಕ್ತ ಇಂದು ಕುಳೂರು ಎಲಿಯಾಣ ದಿ.ದೇರೆ ಪೂಜಾರಿಯವರ ಮಕ್ಕಳು ಶಾಲಾ ಮಕ್ಕಳಿಗೆ ಮಧ್ಯಾಹ್ನ ಭರ್ಜರಿ ಪಾಯಸದೂಟದ ವ್ಯವಸ್ಥೆ ಮಾಡಿರುವರು.

Tuesday, 4 March 2025

ಆರುಷ್ ನ‌ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನ :

       ಕುಳೂರು ಕುಳಿಂಜದ ಶ್ರೀಮತಿ ಮತ್ತು ಶ್ರೀ ಸುನೀತಾ ಶಿವಾನಂದರವರ ಪ್ರೀತಿಯ ಸುಪುತ್ರ, ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರುಷ್ ನ 5 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನವನ್ನು ನೀಡಿದರು. 

Friday, 28 February 2025

ಕುಳೂರು ಶಾಲೆಯಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ :

      ಕಳೆದ ವರ್ಷ ಶತಮಾನೋತ್ಸವವನ್ನು ಆಚರಿಸಿ ಇದೀಗ 101 ನೇ‌ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಳೂರು ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

Tuesday, 25 February 2025

ಪುಟಾಣಿ ಸನ್ಮಯಳ ಪ್ರಥಮ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನ :

       ನಮ್ಮ ಶಾಲಾ ಶಿಕ್ಷಕಿ ಶ್ರೀಮತಿ ನಯನ ಹಾಗೂ ಪ್ರಾಧ್ಯಾಪಕರಾದ ಶ್ರೀ ಸತೀಶ್ ಆಚಾರ್ಯರವರ ಮುದ್ದಿನ ಮಗಳಾದ ಪುಟಾಣಿ ಸನ್ಮಯಳ ಮೊದಲ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಭೋಜನ ಏರ್ಪಡಿಸಲಾಯಿತು. 

Tuesday, 18 February 2025

ಮದುವೆಯ ಸಂಭ್ರಮದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನ :

        ಕಳೆದ ಫೆಬ್ರವರಿ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಳೂರು ಪಾದೆ ಶ್ರೀ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ಕೃಷ್ಣವೇಣಿ ಯವರ ಸುಪುತ್ರಿ ಚಿ|ಸೌ| ಸಹನ ಹಾಗೂ ಚಿ| ಸುಶಾಂತ್ ರವರಿಗೆ ನಮ್ಮ ಶಾಲಾ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಅರ್ಪಿಸುತ್ತೇವೆ. 

Sunday, 26 January 2025

ಕುಳೂರು ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ :

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 67 ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. 

Friday, 24 January 2025

ಮೀಂಜ ಪಂಚಾಯತು ವತಿಯಿಂದ ಶಾಲೆಗೆ ಬೆಂಚು ಡೆಸ್ಕ್ ವಿತರಣೆ :

          ಮೀಂಜ ಗ್ರಾಮ ಪಂಚಾಯತ್ ವತಿಯಿಂದ ನಮ್ಮ ಶಾಲೆಗೆ 4 ಬೆಂಚು ಮತ್ತು 4 ಡೆಸ್ಕ್ ವಿತರಣೆ ಇಂದು ನಡೆಯಿತು. ಇವುಗಳನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಹಾಗೂ ಮೀಂಜ ಪಿ.ಇ.ಸಿ. ಯ ಸೆಕ್ರೆಟರಿಯೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ಮುಖ್ಯ ಶಿಕ್ಷಕರೂ ಆಗಿರುವ ಶ್ರೀ ಸುರೇಶ್ ಬಂಗೇರರವರು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.